ಎಥೆನಾಲ್‌ ಮಿಶ್ರಿತ ಇಂಧನದಿಂದ ಮೈಲೇಜ್‌ ಕಡಿಮೆಯಾಗುತ್ತಾ?: ಗಡ್ಕರಿ ಹೇಳಿದ್ದೇನು?

ಎಥೆನಾಲ್‌ ಮಿಶ್ರಿತ ಇಂಧನದಿಂದ ಮೈಲೇಜ್‌ ಕಡಿಮೆಯಾಗುತ್ತಾ?: ಗಡ್ಕರಿ ಹೇಳಿದ್ದೇನು?
ನವದಹೆಲಿ: ಸರ್ಕಾರ ಎಥೆನಾಲ್ ಮಿಶ್ರಿತ ಇಂಧನ E-20 ಬಿಡುಗಡೆ ಕುರಿತಂತೆ ಸಾಮಾಜಿಕ ಮಾಧ್ಯಮದಲ್ಲಿ ಭುಗಿಲೆದ್ದಿರುವ ವಿರೋಧದ ಕುರಿತಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ.

ದೆಹಲಿಯಲ್ಲಿ ನಡೆದ ಭಾರತೀಯ ಆಟೋಮೊಬೈಲ್ ತಯಾರಕರ ಸಂಘದ 65ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಗಡ್ಕರಿ, ಸಾಂಪ್ರದಾಯಿಕ ಇಂಧನದೊಂದಿಗೆ ಶೇಕಡಾ 20 ರಷ್ಟು ಎಥೆನಾಲ್ ಅನ್ನು ಮಿಶ್ರಣ ಮಾಡುವ E20 ಪೆಟ್ರೋಲ್ ಕುರಿತು ಜಾಲತಾಣಗಳಲ್ಲಿ ಉಂಟಾಗಿರುವ ಕಳವಳಗಳು ರಾಜಕೀಯವಾಗಿ ಪ್ರೇರಿತವಾಗಿವೆ ಎಂದು ವಿವರಿಸಿದರು. ಈ ಇಂಧನವು ಸುರಕ್ಷಿತವಾದ್ದು, ವಾಹನಗಳ ಮೈಲೇಜ್‌ ಹಾಗೂ ಗುಣಮಟ್ಟದ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲ ಎನ್ನುವುದನ್ನು ಸ್ವತಃ ವಾಹನ ತಂತ್ರಜ್ಞರು ಹಾಗೂ ತಯಾರಕರೂ ಕೂಡ ಕಂಡುಕೊಂಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ARAI ಮತ್ತು ಸುಪ್ರೀಂ ಕೋರ್ಟ್ E20 ಕಾರ್ಯಕ್ರಮದ ಕುರಿತು ಸ್ಪಷ್ಟನೆ ಗಡ್ಕರಿ ನೀಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ನನ್ನನ್ನು ಗುರಿಯಾಗಿಸುವಂತೆ ಅಭಿಯಾನ ನಡೆಸಲು ಟ್ರೋಲರ್ಸ್‌ಗಳಿಗೆ ಕೆಲವು ರಾಜಕೀಯ ಶಕ್ತಿಗಳು ಹಣ ಪಾವಿ ಮಾಡಿವೆ ಎಂದು ಗಂಭೀರ ಆರೋಪ ಮಾಡಿದ ಮಾಡಿದ್ದಾರೆ. ಜನರು ಇಂಥಾ ಅಭಿಯಾನಗಳ ಬಗ್ಗೆ ಹೆಚ್ಚಿನ ಗಮನ ಹರಿಸಬಾರದು ಎಂದು ಅವರು ಪ್ರತಿಪಾದಿಸಿದರು.

ಇತ್ತೀಚಿನ ವಾರಗಳಲ್ಲಿ ಎಥೆನಾಲ್ ಮಿಶ್ರಣ ಮತ್ತು E20 ಪೆಟ್ರೋಲ್ ಕಡ್ಡಾಯ ಮಾರಾಟ ಕುರಿತು ವಿರೋಧ ವ್ಯಕ್ತವಾಗುತ್ತಿದೆ. ಈ ಇಂಧನವು ಮೈಲೇಜ್ ಕಡಿಮೆ ಮಾಡುವ ಸಾಧ್ಯತೆ ಮತ್ತು ಹಳೆಯ ವಾಹನಗಳಿಗೆ ಹಾನಿಯಾಗಬಹುದು ಎಂದು ಕೆಲವರು ದೂರುತ್ತಿದ್ದಾರೆ. 2023 ರ ಪೂರ್ವದ ಮಾದರಿಗಳ ಕೆಲವು ವಾಹನ ಮಾಲೀಕರು, ಉದ್ಯಮ ತಜ್ಞರು ಮತ್ತು ಗ್ಯಾರೇಜ್‌ಗಳು ಈ ಬಗ್ಗೆ ದೂರು ನೀಡಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ಗಡ್ಕರಿ, E20 ಬಿಡುಗಡೆ ಪರಿಣಾಮಕಾರಿ ಮತ್ತು ಪ್ರಯೋಜನಕಾರಿಯಾಗಿದೆ. ಕಳೆದ ತಿಂಗಳು ನಡೆದ ಬಿಸಿನೆಸ್ ಟುಡೇ ಇಂಡಿಯಾ ಶೃಂಗಸಭೆಯಲ್ಲಿ, ಅವರು “E20 ನಿಂದ ಕಾರು ಹಾನಿಯಾಗಿದ್ದರೆ ಅದನ್ನು ತೋರಿಸಿ ಎಂದು ಬಹಿರಂಗ ಸವಾಲು ಹಾಕಿದ್ದೆ. ಆದರೆ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು SIAM ಈ ಬಗ್ಗೆ ಪರಿಶೀಲಿಸಿದ್ದು, ಯಾವುದೇ ಹಾನಿ ಪ್ರಕರಣವನ್ನು ಗುರುತಿಸಿಲ್ಲ. ಸುಪ್ರೀಂ ಕೋರ್ಟ್ ಸಹ ಈ ತಿಂಗಳ ಆರಂಭದಲ್ಲಿ E20 ಬಿಡುಗಡೆ ನಿಲುವನ್ನು ಬೆಂಬಲಿಸಿ, ಎಥೆನಾಲ್-ಮುಕ್ತ ಪೆಟ್ರೋಲ್ ಕಡ್ಡಾಯಗೊಳಿಸದಂತೆ ಸಲ್ಲಿಕೆಯಾದ ಅರ್ಜಿಯನ್ನು ವಜಾಗೊಳಿಸಿದೆ. ಸರ್ಕಾರದ ನೀತಿಗೆ ಪ್ರಮುಖ ಕಾನೂನು ಅಡಚಣೆ ತೆರವುಗೊಂಡಿದೆ ಎಂದರು.

E20 ಗಾಗಿ ವಿನ್ಯಾಸಗೊಳಿಸಲಾದ ವಾಹನಗಳಿಗೆ ವಾರಂಟಿ ಮಾನ್ಯವಾಗಿದೆ ಎಂದು ವಾಹನ ತಯಾರಕರು ಮತ್ತು ಇಂಧನ ಪೂರೈಕೆದಾರರು ಹೇಳಿದರು. ಎಥೆನಾಲ್ ಮಿಶ್ರಣ ತೈಲ ಆಮದುಗಳನ್ನು ಕಡಿಮೆ ಮಾಡುತ್ತದೆ, ಹೊರಸೂಸುವಿಕೆಯನ್ನು ತಗ್ಗಿಸುತ್ತದೆ ಮತ್ತು ರೈತರ ಆದಾಯವನ್ನು ಹೆಚ್ಚಿಸುತ್ತದೆ ಎಂದು ಸರ್ಕಾರವು ಸಮರ್ಥಿಸುತ್ತದೆ ಎಂದರು. ಗಡ್ಕರಿ ಪುನರುಚ್ಚರಿಸಿ, ಮೆಕ್ಕೆಜೋಳದಿಂದ ಎಥೆನಾಲ್ ಉತ್ಪಾದನೆ ನಿರ್ಧರಿಸಿ, ಉತ್ತರ ಪ್ರದೇಶ, ಬಿಹಾರ ಮತ್ತು ದೇಶಾದ್ಯಂತ ಮೆಕ್ಕೆಜೋಳ ಕೃಷಿಯನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ ಎಂದು ವಿವರಿಸಿದರು. ಕೃಷಿಯ ವೈವಿಧ್ಯತೆ, ತೈಲ ಮತ್ತು ವಿದ್ಯುತ್ ವಲಯಕ್ಕೆ ಹೊಸ ಆದಾಯದ ಅವಕಾಶಗಳನ್ನು ಒದಗಿಸುವುದರಿಂದ ರೈತರಿಗೆ ನೇರ ಪ್ರಯೋಜನವುಂಟಾಗುತ್ತದೆ ಎಂದು ಅವರು ಹೇಳಿದರು.

ಸ್ವಚ್ಛ ವಾಹನ ಅಳವಡಿಕೆಯನ್ನು ಉತ್ತೇಜಿಸಲು, ಗಡ್ಕರಿ ಹಳೆಯ ವಾಹನಗಳನ್ನು ಸ್ಕ್ರಾಪ್ ಮಾಡಿದ ನಂತರ ಹೊಸ ವಾಹನ ಖರೀದಿಸಿದ ಗ್ರಾಹಕರಿಗೆ ಜಿಎಸ್‌ಟಿ ರಿಯಾಯಿತಿಯನ್ನು ನೀಡಲು ಪ್ರಧಾನಿ ಮತ್ತು ಹಣಕಾಸು ಸಚಿವರಿಗೆ ವಿನಂತಿ ಮಾಡಿದ್ದಾರೆ.

error: Content is protected !!