ಆಕಸ್ಮಿಕ ಏರ್ ಗನ್ ಫೈರಿಂಗ್: ಬಾಲಕ ಸಾವು !

ಶಿರಸಿ: ಆಕಸ್ಮಿಕವಾಗಿ ಏರ್ ಗನ್ ನಿಂದ ಹಾರಿದ ಗುಂಡಿನ ಪರಿಣಾಮ 9 ವರ್ಷದ ಬಾಲಕ‌ ಮೃತಪಟ್ಟ ಘಟನೆ ಶುಕ್ರವಾರ(ಸೆ.5) ನಡೆದಿದೆ.

ಕರಿಯಪ್ಪ ಮೃತ ಬಾಲಕ.

ಮೃತ ಕರಿಯಪ್ಪನೊಂದಿಗೆ ಇದ್ದ ಇನ್ನೊಬ್ಬ ಬಾಲಕ ಏರ್ ಗನ್ ಟ್ರಿಗರ್ ಒತ್ತಿದ ಕಾರಣದಿಂದ ಈ ಘಟನೆ ನಡೆದಿದೆ.

(ಜಾಹೀರಾತು)ಮಂಗಳೂರು: ADVOCATE ಕಚೇರಿಗೆ ಪದವಿ ಪಡೆದಿರುವ ಯುವತಿ ಬೇಕಾಗಿದ್ದಾರೆ. ಸಂಪರ್ಕ ಸಂಖ್ಯೆ: 8660040298

ಶಿರಸಿ ಸಮೀಪದ ಚಿಪಗಿ ಸೋಮನಳ್ಳಿ ಎಂಬಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆಯ ಪೊಲೀಸರ ಭೇಟಿ‌ ನೀಡಿದ್ದಾರೆ.

error: Content is protected !!