ಸಮೀರ್‌ ದೂತನ ಮೇಲೆ ಎಫ್‌ಐಆರ್‌: ಹಲವು ಸೆಕ್ಷನ್‌ಗಳನ್ನು ಹಾಕಿದ ಪೊಲೀಸರು

ಬೆಂಗಳೂರು: ಕೃತಕ ಬುದ್ಧಿಮತ್ತೆ(AI) ಟೂಲ್ ಬಳಸಿಕೊಂಡು ವಿಡಿಯೋಗಳನ್ನು ಪ್ರಕಟಿಸಿದ ಆರೋಪದ ಮೇಲೆ ʻದೂತ ‘ ಎಂಬ ಯೂಟ್ಯೂಬ್ ಚಾನೆಲ್‌ನ ಮಾಲೀಕ ಸಮೀರ್ ಎಂ.ಡಿ. ವಿರುದ್ಧ ಧರ್ಮಸ್ಥಳ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿದ್ದಾರೆ. ಈ ಎಫ್‌ಐಆರ್‌ನಲ್ಲಿ ಹಲವು ಸೆಕ್ಷನ್‌ಗಳನ್ನು ಹಾಕಲಾಗಿದೆ.


ಹಿಂದೂ ಧರ್ಮದ ಪವಿತ್ರ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವುದಕ್ಕೆ ಯೂಟೂಬರ್ ಸಮೀರ್ ತಮ್ಮ ಚಾನೆಲ್‌ನಲ್ಲಿ ಎಐ ಟೂಲ್ ಬಳಸಿಕೊಂಡು ಒಂದು ಕಾಲ್ಪನಿಕ ಘಟನೆಯನ್ನು ಸೃಷ್ಟಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ವಿಡಿಯೋದಲ್ಲಿ, ಧರ್ಮಸ್ಥಳದಲ್ಲಿ ಯುವತಿ ಮತ್ತು ಮಹಿಳೆಯರು ಸೇರಿದಂತೆ 1 ಸಾವಿರ ಜನರನ್ನು ರೇಪ್ ಮಾಡಿ, ಕೊಲೆ ಮಾಡಿ ಮುಚ್ಚಿಹಾಕಿದ್ದಾರೆ’ ಎಂದು ಹೇಳಿದ್ದಾನೆ. ʻಇದನ್ನು ಕೇಳಿದರೆ ನಿಮ್ಮ ರಕ್ತ ಕುದಿಯುತ್ತಿಲ್ಲವೇ?’ ಎಂದು ಯೂಟೂಬ್ ವೀಕ್ಷಕರನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಅಲ್ಲದೆ, ಸಮೀರ್ ʻಕರ್ನಾಟಕದ ಮೂಲೆ ಮೂಲೆಯಲ್ಲಿರುವವರು ಬೀದಿಗಿಳಿದು ಪ್ರತಿಭಟಿಸಿ’ ಮತ್ತು ʻಈ ಅನ್ಯಾಯದ ವಿರುದ್ಧ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು’ ಎಂದು ಕರೆ ನೀಡುವ ಮೂಲಕ ಸಾರ್ವಜನಿಕ ನೆಮ್ಮದಿಗೆ ಭಂಗ ತರಲು ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂತಹ ಹೇಳಿಕೆಗಳು ಉದ್ದೇಶಪೂರ್ವಕವಾಗಿ ಸಾರ್ವಜನಿಕರಲ್ಲಿ ದಂಗೆಯನ್ನು ಪ್ರಚೋದಿಸುವ ಉದ್ದೇಶ ಹೊಂದಿವೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿದೆ.

ಸಮೀರ್ ವಿರುದ್ಧ ದಾಖಲಾದ ಸೆಕ್ಷನ್‌ಗಳು:
ಪೊಲೀಸರು ಸಮೀರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ:
BNS ಸೆಕ್ಷನ್ 192: ದಂಗೆ ಉದ್ದೇಶದಿಂದ ಪ್ರಚೋದನಕಾರಿ ಹೇಳಿಕೆ ನೀಡಿರುವುದು.
BNS ಸೆಕ್ಷನ್ 240: ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸಿರುವುದು.
BNS ಸೆಕ್ಷನ್ 353(1)(b): ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ತಪ್ಪು ಸಂದೇಶಗಳನ್ನು ಹರಡಿ ಸಾರ್ವಜನಿಕರಲ್ಲಿ ಉದ್ರೇಕವನ್ನುಂಟು ಮಾಡಿರುವುದು.
ಸೈಬರ್ ಅಪರಾಧಗಳು ಮತ್ತು ಸಾಮಾಜಿಕ ಮಾಧ್ಯಮಗಳ ದುರುಪಯೋಗಕ್ಕೆ ಸಂಬಂಧಿಸಿದಂತೆ ಇದು ಒಂದು ಗಂಭೀರ ಪ್ರಕರಣವಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸುಳ್ಳು ಸುದ್ದಿ ಹರಡುವುದು ಮತ್ತು ಸಾರ್ವಜನಿಕರನ್ನು ಪ್ರಚೋದಿಸುವುದು ಕಾನೂನು ಪ್ರಕಾರ ಗಂಭೀರ ಅಪರಾಧ ಎಂದು ಈ ಪ್ರಕರಣ ಮತ್ತೊಮ್ಮೆ ಎತ್ತಿ ತೋರಿಸಿದೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!