ಮಂಗಳೂರು: ಹಂಪನ ಕಟ್ಟೆಯ ಯುನಿಸೆಕ್ಸ್ ಸೆಲೂನ್‌ನಲ್ಲಿ ಬ್ಯೂಟೀಶಿಯನ್ ಆಗಿ ಕೆಲಸ ಮಾಡುತ್ತಿದ್ದ ತನ್ನನ್ನು ಗ್ರಾಹಕರಿಗೆ ಮಸಾಜ್ ಮಾಡಿಸಿರುವುದು ಮಾತ್ರವಲ್ಲದೆ ಮಾಲಕಿ ಹಲ್ಲೆ ನಡೆಸಿ, ಅರೆಬೆತ್ತಲೆ ಫೋಟೋ ತೆಗೆದು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಶುಕ್ರವಾರ(ಆ.08)ದಂದು ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡಿರುವ ಮಹಿಳೆ, ಬ್ಯೂಟೀಶಿಯನ್ ಕೋರ್ಸ್ ಮಾಡಿದ್ದ ತಾನು ಸುಮಾರು ಒಂದೂವರೆ ತಿಂಗಳ ಹಿಂದೆ ಸೆಲೂನ್‌ನಲ್ಲಿ ಕೆಲಸಕ್ಕೆ ಸೇರಿದ್ದೆ. ಆ ವೇಳೆ ಅಲ್ಲಿನ ಮಾಲಕರು, ಗ್ರಾಹಕರೊಂದಿಗೆ ಆತ್ಮೀಯವಾಗಿದ್ದು ಅವರಿಗೆ ಸೇವೆಯನ್ನು ಒದಗಿಸುವಂತೆ ಮತ್ತು ಅವರಿಂದ 500 ರೂ.ನಿಂದ 1 ಸಾವಿರ ರೂ. ವರೆಗೆ ಸೇವಾ ಭತ್ತೆ (ಟಿಪ್ಸ್) ಪಡೆಯುವಂತೆ ತಿಳಿಸಿದ್ದರು.
ಸೋಮವಾರ ಮಾಲಕರ ಪರಿಚಯದ ಪುರುಷ ಗ್ರಾಹಕರೊಬ್ಬರು ಬಂದು ಮಸಾಜ್ ಮಾಡಿಸಿಕೊಂಡಿದ್ದಾರೆ. ಈ ವೇಳೆ ಅವರೊಂದಿಗೆ ಮಾತನಾಡಿದ್ದನ್ನು ವಾಯ್ಸ ರೆಕಾರ್ಡ್ ಮಾಡಿ ಮಾಲಕರಿಗೆ ನೀಡಿದ್ದಾರೆ. ಸ್ವಲ್ಪ ಹೊತ್ತಿನಲ್ಲೇ ಮಾಲಕರು ಒಳಗೆ ಬಂದು ಹಲ್ಲೆ ನಡೆಸಿ, ಅರೆಬೆತ್ತಲೆ ಫೋಟೋ ತೆಗೆದು ಬೆದರಿಕೆ ಒಡ್ಡಿದ್ದಾರೆ. ಮರುದಿನ ಪತಿಯನ್ನು ಕರೆಯಿಸಿ ಅವರಿಗೂ ಫೋಟೋ ತೋರಿಸಿ ಮಾನಸಿಕ ಹಿಂಸೆ ನೀಡಿದ್ದಾರೆ. ನನಗೆ ಮೂರು ವರ್ಷದ ಮಗುವಿದ್ದು, ಆತ್ಮಹತ್ಯೆಗೆ ಯೋಚನೆ ಮಾಡಿದ್ದ ನಾನು ಈ ವಿಚಾರವನ್ನು ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ಅವರ ಗಮನಕ್ಕೆ ತಂದೆ. ಬಳಿಕ ಅವರ ಸೂಚನೆಯಂತೆ ಬಂದರು ಠಾಣೆಯಲ್ಲಿ ದೂರು ನೀಡಲಾಗಿದೆ ಎಂದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj
ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇
https://whatsapp.com/channel/0029VbARfil9mrGlVgUEnJ19