ಸಿಂಗಾಪುರ: ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಮುಂದಿನ ಮೂರೂ ಆವೃತ್ತಿಗಳ ಫೈನಲ್ ಪಂದ್ಯಗಳನ್ನು ಇಂಗ್ಲೆಂಡ್‌ನಲ್ಲೇ ನಡೆಸಲು ಐಸಿಸಿ ತೀರ್ಮಾನಿಸಿದೆ. ಐಸಿಸಿ ವಾರ್ಷಿಕ ಮಹಾಸಭೆಯಲ್ಲಿ ಈ ನಿರ್ಧಾರಕ್ಕೆ ಬಂದಿದೆ.
ಅದರಂತೆ 2027, 2029 ಹಾಗೂ 2031ರ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಇಂಗ್ಲೆಂಡ್‌ನಲ್ಲಿ ಏರ್ಪಡಲಿದೆ. ಎರಡು ವರ್ಷಗಳ ಆವೃತ್ತಿಯ ಫೈನಲ್ ಪಂದ್ಯಗಳನ್ನು ಜೂನ್‌ನಲ್ಲಿ ನಡೆಸುವುದು ವಾಡಿಕೆ. ಈ ಸಮಯದಲ್ಲಿ ಇಂಗ್ಲೆಂಡ್ ಹೊರತುಪಡಿಸಿ ಬೇರೆಲ್ಲೂ ವಾತಾವರಣ ಅನುಕೂಲಕರವಾಗಿರದ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡಿದೆ.
ಈವರೆಗಿನ ಮೂರೂ ಟೆಸ್ಟ್ ಫೈನಲ್ ಇಂಗ್ಲೆಂಡ್‌ನಲ್ಲೇ ನಡೆದಿತ್ತು. 2021ರಲ್ಲಿ ಸೌತಾಂಪ್ಟನ್ (ಭಾರತ- ನ್ಯೂಜಿಲ್ಯಾಂಡ್), 2023ರಲ್ಲಿ ಓವಲ್ (ಭಾರತ-ಆಸ್ಟ್ರೇಲಿಯ) ಹಾಗೂ 2025ರಲ್ಲಿ ಲಂಡನ್‌ನಲ್ಲಿ (ದಕ್ಷಿಣ ಆಫ್ರಿಕಾ-ಆಸ್ಟ್ರೇಲಿಯ) ಫೈನಲ್ ಪಂದ್ಯವನ್ನು ಆಡಲಾಗಿತ್ತು.
ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t