ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲಿನತ್ತ “ಜೋ ರೂಟ್‌” :ದ್ವಿತೀಯ ಸ್ಥಾನಕ್ಕೆ ಲಗ್ಗೆ !

ಲಂಡನ್‌: ಇಂಗ್ಲೆಂಡ್​ನ ಮಾಜಿ ನಾಯಕ ಜೋ ರೂಟ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇನ್ನು ಕೇವಲ 120 ರನ್‌ ಹೊಡೆದರೆ ದ್ವಿತೀಯ ಸ್ಥಾನಕ್ಕೆ ಲಗ್ಗೆಯಿಡಲಿದ್ದಾರೆ. ಸಚಿನ್‌ ತೆಂಡುಲ್ಕರ್‌ ಅನಂತರದ ಸ್ಥಾನದಲ್ಲಿ ರೂಟ್ ಕಾಣಿಸಿಕೊಳ್ಳಲಿದ್ದಾರೆ !

ಭಾರತದೆದುರು ಸರಣಿ ಟೆಸ್ಟ್‌ ಪಂದ್ಯಗಳ ವೇಳೆ ಜೋ ರೂಟ್‌ ಈ ಸಾಧನೆಗೈಯುವ ಸಾಧ್ಯತೆ ದಟ್ಟವಾಗಿದೆ. ಸದ್ಯ ಜೋ ರೂಟ್‌ 13,259 ರನ್ನುಗಳೊಂದಿಗೆ 5ನೇ ಸ್ಥಾನದಲ್ಲಿದ್ದಾರೆ.

ಭಾರತ ವಿರುದ್ಧದ ಟೆಸ್ಟ್‌ನಲ್ಲಿ ಜೋ ರೂಟ್ ಉತ್ತಮ ಪ್ರದರ್ಶನ ನೀಡಿದ್ದು, ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಜೋ ರೂಟ್ 144 ರನ್ ಗಳಿಸಿದ​ದರು. ಮೊದಲ ಇನ್ನಿಂಗ್ಸ್‌ನಲ್ಲಿ 104 ರನ್ ಬಾರಿಸಿದ್ದ ರೂಟ್, ಎರಡನೇ ಇನ್ನಿಂಗ್ಸ್‌ನಲ್ಲಿ 40 ರನ್​ಗಳ

ತೆಂಡುಲ್ಕರ್‌ ಮೊದಲ (15,921) ಸ್ಥಾನದಲ್ಲಿದ್ದು, ರಿಕಿ ಪಾಂಟಿಂಗ್‌ ದ್ವಿತೀಯ(13,378) ಸ್ಥಾನದಲ್ಲಿದ್ದಾರೆ . ಅನಂತರದ ಸ್ಥಾನದಲ್ಲಿ ಜಾಕ್‌ ಕ್ಯಾಲಿಸ್‌ (13,289) ಮತ್ತು ರಾಹುಲ್‌ ದ್ರಾವಿಡ್‌ (13,288) ಇದ್ದಾರೆ. ರೂಟ್‌ ಇನ್ನು 120 ರನ್‌ ಹೊಡೆದರೆ ದ್ರಾವಿಡ್‌, ಕ್ಯಾಲಿಸ್‌, ಪಾಂಟಿಂಗ್‌ ಅವರನ್ನೆಲ್ಲ ಹಿಂದಿಕ್ಕಿ ದ್ವಿತೀಯ ಸ್ಥಾನಕ್ಕೆ ಏರಲಿದ್ದಾರೆ.

 

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/JaPBl9THV4d0QHbJzEdgVQ?mode=r_t

error: Content is protected !!