ಆರ್ಭಟಿಸಿದ ಆಟಿಯ ಮಳೆ: ಮಂಗಳೂರು ಜಿಲ್ಲೆ ತತ್ತರ

ಮಂಗಳೂರು: ಆಟಿ ತಿಂಗಳ(ಆಷಾಢ ಮಾಸ) ಮೊದಲ ಮಳೆ ರಾಕ್ಷಸನಂತೆ ಅಬ್ಬರಿಸಿದ್ದು, ಇಡೀ ಮಂಗಳೂರು ಜಿಲ್ಲೆ ತತ್ತರಿಸಿದೆ. ಜಿಲ್ಲೆಯ ನಾನಾ ಭಾಗಗಳಲ್ಲಿ ಗುಡ್ಡ ಕುಸಿತದ ವರದಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 75 ಸೇರಿದಂತೆ ಜಿಲ್ಲೆಯ ಹಲವು ಹಳ್ಳಿಗಳು, ಪಟ್ಟಣಗಳು, ಗ್ರಾಮಗಳು ನಡುಗಡ್ಡೆಯಲ್ಲಿ ಸಿಲುಕಿದೆ.

ಇನ್ನು ಯೆಯ್ಯಾಡಿ ಮೇರಿಹಿಲ್ ಬಳಿ ಆವರಣ ಗೋಡೆ ಕುಸಿದು ಬಿದ್ದಿದ್ದು, ಪಕ್ಕದಲ್ಲಿ ನಿಲ್ಲಿಸಿದ್ದ ಹಲವು ದ್ವಿಚಕ್ರ ವಾಹನಗಳು ಜಖಂಗೊಂಡು ಅಪಾರ ಹಾನಿ ನಷ್ಟ ಉಂಟಾಗಿದೆ.

ಸರ್ಕ್ಯೂಟ್‌ ಹೌಸ್‌ ಬಿಜೈ ರಸ್ತೆಗೆ ಗುಡ್ಟಡ ಜರಿದು ಬಿದ್ದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದ್ದು, ಮಣ್ಣು ತೆರವು ಕಾರ್ಯ ಆರಂಭಗೊಂಡಿದೆ. ಇದೇ ಗುಡ್ಡದಲ್ಲಿ ಸರ್ಕ್ಯೂಟ್‌ ಹೌಸ್‌ ಇದ್ದು, ಇಲ್ಲಿ ಸರ್ಕಾರಿ ಬಂಗ್ಲೆ ಇದೆ. ರಾಜ್ಯ-ದೇಶದ ಮಂತ್ರಿ ಮಾಗದರು ಇಲ್ಲಿ ಉಳಿದುಕೊಂಡಿದ್ದು, ಸಾರ್ವಜನಿಕ ಸೇವೆಗೆಂದೇ ಇದನ್ನು ನಿರ್ಮಿಸಲಾಗಿದೆ. ಆದರೆ ಇದೀಗ ಅದೇ ಗುಡ್ಡ ನಿಧಾನಕ್ಕೆ ಕುಸಿಯತ್ತಿರುವುದರಿಂದ ಸರ್ಕ್ಯೂಟ್‌ ಹೌಸ್‌ಗೆ ಕಂಟಕ ಎದುರಾಗಿದೆ.

ಕೊಟ್ಟಾರ ಚೌಕಿಯಲ್ಲಿ ಎಂದಿನಂತೆ ಈ ಬಾರಿಯೂ ರಸ್ತೆಯಲ್ಲೇ ನೀರು ತೋಡಿನಂತೆ ಹರಿದಾಡಿದ್ದು, ವಾಹನ ಸವಾರರು ಸಂಕಟ ಅನುಭವಿಸಿದ್ದಾರೆ. ಅಲ್ಲದೆ ಹಲವು ಅಂಗಡಿಗಳಿಗೆ ನೆರೆ ನೀರು ನುಗ್ಗಿದೆ. ಇಲ್ಲಿರುವ ಮುಖ್ಯ ಕಾಲುವೆಯಲ್ಲಿ ತ್ಯಾಜ್ಯ ತುಂಬಿದ್ದು, ಇದರ ತೆರವು ಕಾರ್ಯ ಸರಿಯಾಗಿ ನಡೆಯದ ಕಾರಣ ಇಲ್ಲಿ ಅಬ್ಬರದ ಮಳೆ ಬಂದಾಗ ಹೆದ್ದಾರಿಯಲ್ಲಿ ಸಂಚರಿಸುವುದು ಸಾಮಾನ್ಯ ಎನಿಸಿದೆ.

ನೂತನ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಬುಧವಾರ ರಾತ್ರಿ ಬಿಜೈ ಬಟ್ಟಗುಡ್ಡ, ಆರ್ಯಸಮಾಜ ರಸ್ತೆ, ಪಂಪ್ ವೆಲ್, ಮಾಲೆಮಾರ್, ಕಾವೂರು ಉಲ್ಲಾಸ ನಗರ, ಕೊಟ್ಟಾರ ಚೌಕಿ ಸೇರಿದಂತೆ ಮಳೆ ಹಾನಿ ಸಂಭವಿಸಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಇಲ್ಲಿನ ಪರಿಸ್ಥಿತಿಯನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

error: Content is protected !!