ಮಂಗಳೂರಿನಲ್ಲಿ ಹಿಸ್ತಾರ ಶೋಕೇಸ್ ವಜ್ರಾಭರಣ ಮತ್ತು ವಿಂಟೇಜ್ ಆ್ಯಂಟಿಕ್ ಚಿನ್ನಾಭರಣ ಪ್ರದರ್ಶನ ಮತ್ತು ಮಾರಾಟ ಮೇಳ

ಮಂಗಳೂರು : ಮಂಗಳೂರಿನಲ್ಲಿ ಜನಮನಸ್ಸು ಗೆದ್ದಂತಹ  ಪ್ರಸಿದ್ಧ ಜ್ಯುವೆಲ್ಲರಿ ಸಿಟಿ ಗೋಲ್ಡ್ ನೇತೃತ್ವದಲ್ಲಿ ಹಿಸ್ತಾರ ಶೋಕೇಸ್ ವಜ್ರಾಭರಣ ಮತ್ತು ವಿಂಟೇಜ್ ಆ್ಯಂಟಿಕ್ ಚಿನ್ನಾಭರಣದ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನೆ ಶನಿವಾರ ಸಂಜೆ ಕಂಕನಾಡಿಯಲ್ಲಿರುವ ಸಿಟಿ ಗೋಲ್ಡ್ ಕಚೇರಿಯಲ್ಲಿ ನಡೆಯಿತು. ಜೂನ್ 28 ರಿಂದ ಜುಲೈ 28 ರವರೆಗೆ ಈ ಮೇಳ ನಡೆಯಲಿದೆ.

ಖ್ಯಾತ ನಿರೂಪಕಿ ಸೌಮ್ಯ ಕೋಟ್ಯಾನ್ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಸಿಂಗರ್ ಶಮೀರ್ ಮುಡಿಪು ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಹಿಂದಿ ಹಾಡನ್ನು ಹಾಡಿ ಮನರಂಜಿಸಿದರು. ಇನ್ನೋರ್ವ ಮುಖ್ಯ ಅತಿಥಿಯಾಗಿ ಖನೀಝಾ ಫಾತಿಮಾ ಹಾಗೂ  ಬಸ್ ಮಾಲೀಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ  ಕಾರ್ಯಕ್ರಮದ ಕುರಿತು ಮಾತನಾಡಿದರು.
ಪ್ರಿವಿ ಡಿಸೋಜಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬ್ರ್ಯಾಂಚ್ ಮ್ಯಾನೇಜರ್ ಅಹ್ಮದ್ ಹಫೀಝ್, ಅಸಿಸ್ಟೆಂಟ್ ಬ್ರ್ಯಾಂಚ್ ಮ್ಯಾನೇಜರ್, ಅಝೀಝ್ ಎಸ್ ಎ, ಸೇಲ್ಸ್ ಮ್ಯಾನೇಜರ್ ಇಮ್ರಾನ್.ವಿ, ಮಾರ್ಕೆಟಿಂಗ್ ಮ್ಯಾನೇಜರ್ ಜುನೈದ್ ಹಾಗೂ ಸಿಬ್ಬಂದಿ ವರ್ಗ, ಗ್ರಾಹಕರು ಉಪಸ್ಥಿತರಿದ್ದರು.

ಹಿಸ್ತಾರ ಶೋಕೇಸ್ ಪ್ರದರ್ಶನ ಪ್ರಯುಕ್ತ ಗ್ರಾಹಕರಿಗೆ ವಜ್ರಾಭರಣ ಖರೀದಿಯಲ್ಲಿ ಒಂದು ಕ್ಯಾರೆಟ್ ಗೆ ₹12000 ರಿಯಾಯಿತಿ ನೀಡಲಾಗುವುದು ಹಾಗು ಚಿನ್ನಾಭರಣ ಖರೀದಿಯಲ್ಲಿನ ಮೇಕಿಂಗ್ ಚಾರ್ಜಸ್ ಮೇಲೆ ಶೇಕಡಾ 55ರಷ್ಟು ರಿಯಾಯಿತಿ ನೀಡಲಾಗವುದು. ಪ್ರತಿ ಚಿನ್ನಾಭರಣ ಹಾಗೂ ವಜ್ರದ ಖರೀದಿಯ ಮೇಲೆ ಉಡುಗೊರಗಳನ್ನು ನೀಡಲಾಗುವುದು. ಅತ್ಯುತ್ತಮ ಸಂಗ್ರಹಗಳ ಜೊತೆಗೆ, ಈ ಪ್ರದರ್ಶನದ ಸಮಯದಲ್ಲಿ ಮಾತ್ರ ನೀವು ವಿಶೇಷ ಕೊಡುಗೆಗಳನ್ನು ಕಾಣಬಹುದು. ದೇಶ ವಿದೇಶಗಳಲ್ಲಿ ತಯಾರಿಸಲ್ಪಟ್ಟ ವಜ್ರಾಭರಣ ಹಾಗೂ ಚಿನ್ನಾಭರಣ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj

error: Content is protected !!