ಕೇರಳ: ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS), 2023 ರ ಸೆಕ್ಷನ್ 107 ರ ಪ್ರಕಾರ ಮ್ಯಾಜಿಸ್ಟ್ರೇಟ್ ಆದೇಶದ ಮೇರೆಗೆ ಮಾತ್ರ ಪೊಲೀಸರು ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಬಹುದು ಇದರ ಹೊರತುಪಡಿಸಿ ಪೊಲೀಸರೇ ಏಕಪಕ್ಷೀಯವಾಗಿ ಜಪ್ತಿ ಮಾಡಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಸೆಕ್ಷನ್ 107 BNSS ಪ್ರಕಾರ ಈ ರೀತಿ ಪೊಲೀಸರು ಈ ರೀತಿ ಜಪ್ತಿ ಮಾಡುವುದು ಅದು ʻಅಪರಾಧದ ಆದಾಯʼ ಆಗುತ್ತದೆ ಎಂದು ಕೋರ್ಟ್ ಅಭಿಪ್ರಾಯಿಸಿದೆ.
ನ್ಯಾಯಮೂರ್ತಿ ವಿ.ಜಿ. ಅರುಣ್ ಅವರು ಹೆಡ್‌ಸ್ಟಾರ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ, ಸ್ಪೆಜಿಯಾ ಆರ್ಗಾನಿಕ್ ಕಾಂಡಿಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಒಳಗೊಂಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಹಣವನ್ನು ತನ್ನ ಖಾತೆಗೆ ವರ್ಗಾಯಿಸಲಾಗಿದೆ ಎಂಬ ಆರೋಪದ ನಂತರ ಕಲಾಮಸ್ಸೆರಿ ಪೊಲೀಸರು ಸಂಸ್ಥೆಯ ಖಾತೆ ಸ್ಥಗಿತಗೊಳಿಸಿದ್ದರು. ಇದಕ್ಕಾಗಿ ಅರ್ಜಿದಾರರು ತಕರಾರು ಅರ್ಜಿ ಸಲ್ಲಿಸಿ ಇದು ಕಂಪೆನಿ ಆಸ್ತಿ ಹಾಗಾಗಿ ಜಪ್ತಿ ಮಾಡಬಾರದು ಎಂದು ವಾದಿಸಿತ್ತು.
ಇದನ್ನು ಗಮನಿಸಿದ ನ್ಯಾಯಾಲಯ ಸೆಕ್ಷನ್ 106 ಬಿಎನ್‌ಎಸ್‌ಎಸ್ ಅಡಿಯಲ್ಲಿ ‘ವಶಪಡಿಸಿಕೊಳ್ಳುವ’ ಅಧಿಕಾರವು ಸೆಕ್ಷನ್ 107 ಬಿಎನ್‌ಎಸ್‌ಎಸ್ ಅಡಿಯಲ್ಲಿ ಜಪ್ತಿಗಿಂತ ಭಿನ್ನವಾಗಿದೆ. ಮೊದಲನೆಯದಾಗಿ, ಸೆಕ್ಷನ್ 102 ಸಿಆರ್‌ಪಿಸಿ ಪ್ರಕಾರ ಪೊಲೀಸರು ಬ್ಯಾಂಕ್ ಖಾತೆಯನ್ನು ವಶಪಡಿಸಿಕೊಳ್ಳುವ/ಮುಚ್ಚುವ ಅಧಿಕಾರವನ್ನು ಹೊಂದಿದ್ದಾರಾ ಎನ್ನುವುದನ್ನು ನ್ಯಾಯಾಲಯವು ಗಮನಿಸಿತು. ಯಾವುದೇ ಪೊಲೀಸ್ ಅಧಿಕಾರಿ ಕದ್ದ ಆಸ್ತಿ ಅಥವಾ ಯಾವುದೇ ಅಪರಾಧದ ಅನುಮಾನ ಉಂಟುಮಾಡುವ ಸಂದರ್ಭಗಳಲ್ಲಿ ಕಂಡುಬರುವ ಯಾವುದೇ ಆಸ್ತಿಯನ್ನು ಜಪ್ತಿ ಮಾಡಬಹುದು ಎಂದು ಹೇಳುತ್ತದೆ. ಆದರೆ ಕದ್ದ ಆಸ್ತಿಯಲ್ಲದ ಅಥವಾ ಯಾವುದೇ ಅಪರಾಧದ ಅನುಮಾನವನ್ನು ಉಂಟುಮಾಡದ ಯಾವುದೇ ಆಸ್ತಿಯನ್ನು ವಶಪಡಿಸಿಕೊಳ್ಳಲು ಪೊಲೀಸರು ವಶಪಡಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಿಸಿದೆ.
ಹಾಗಾಗಿ ಈ ಹಿಂದೆ ಕಂಪೆನಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದನ್ನು ರದ್ದು ಪಡಿಸಿ, ಕಂಪೆಪಿನಿಯ ಡೆಬಿಟ್ ಫ್ರೀಜ್ ಮಾಡಿರುವುದನ್ನು ತೆಗೆದು ಹಾಕು ಆದೇಶಿಸಿದೆ. ಕಂಪೆನಿ ಖಾತೆಯನ್ನು ಜಪ್ತಿ ಮಾಡಲು ಕೋರಿದರೆ ಪೊಲೀಸರು ಮ್ಯಾಜಿಸ್ಟ್ರೇಟ್ ಅವರನ್ನು ಸಂಪರ್ಕಿಸುವ ಸ್ವಾತಂತ್ರ್ಯವನ್ನೂ ಸಹ ಹೊಂದಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಿಸಿದೆ.