ಮಸೀದಿ ಕೊಠಡಿಯಲ್ಲೇ ಬಾಲಕಿ ಅತ್ಯಾಚಾರ: ಆರೋಪಿ ಮೌಲ್ವಿಯ ತಂದೆ ಸೆರೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದ ಶಮ್ಸ್ ಮಸೀದಿ ಕೊಠಡಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಮೌಲ್ಯಿಯೋರ್ವನ 55 ವರ್ಷದ ತಂದೆಯ ಮೇಲೆ ಬಾಲಕಿಯ ತಾಯಿ ಹಿಗ್ಗಾಮುಗ್ಗ ಥಳಿಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೌಲ್ವಿಯ ತಂದೆ ಮಹಪ್ಯೂಸ್(55) ಬಂಧಿತ ಆರೋಪಿಯಾಗಿದ್ದು, ಸಂತ್ರಸ್ತೆ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದಲ್ಲಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿಯ ಮಗ ಬೇರೊಂದು ಮಸೀದಿಯಲ್ಲಿ ಮೌಲ್ವಿಯಾಗಿ ಕೆಲಸ ಮಾಡುತ್ತಿದ್ದುದರಿಂದ ಮೌಲ್ವಿಯ ಆಶ್ರಯಕ್ಕೆ ಮಸಿದಿಯ ಕೊಠಡಿಯನ್ನು ಜಮಾಅತ್ ನೀಡಿತ್ತು. ಅದೇ ಕೊಠಡಿಯನ್ನು ಆರೋಪಿ ಮಹಪ್ಯೂಸ್ ದುರುಪಯೋಗಪಡಿಸಿಕೊಂಡಿದ್ದಾನೆ. ಚಾಕೊಲೇಟ್ ಕೊಡಿಸುವ ಆಮಿಷವೊಡ್ಡಿ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಆರೋಪಿ ಮಹಪ್ಯೂಸ್ ಮೂಲತಃ ಉತ್ತರ ಪ್ರದೇಶ ಮೂಲದವನಾಗಿದ್ದು, 20 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರಕ್ಕೆ ಬಂದು ವಾಸ್ತವ್ಯ ಹೂಡಿದ್ದು, ಬೀದಿ ಬದಿ ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ರೂಪಿಸುತ್ತಿದ್ದ ಎಂದು ತಿಳಿದುಬಂದಿದೆ. ಹೊರ ರಾಜ್ಯದವರ ಬಗ್ಗೆ ತೀವ್ರ ನಿಗಾ ಇರಿಸಬೇಕು ಎಂಬ ಕೂಗಿನ ನಡುವೆ ಈ ಕೃತ್ಯ ನಡೆದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮಸೀದಿಯ ಮೌಲ್ವಿ ಸುಹೇಬ್​​ನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದು, ಮೌಲ್ವಿಯ ಆಶ್ರಯಕ್ಕೆಂದು ಪಡೆದ ಕೊಠಡಿಯನ್ನು ತಂದೆಗೆ ಯಾಕೆ ನೀಡಿದ್ದು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಸಂತ್ರಸ್ತೆಯ ಬಾಲಕಿಯ ತಾಯಿ ಆರೋಪಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.

error: Content is protected !!