ಮುಂದುವರಿದ ಆಪರೇಷನ್‌ ಸಿಂದೂರ್:‌ ಪಾಕಿಸ್ತಾನಕ್ಕೆ ಒಟಿಪಿ ನೀಡುತ್ತಿದ್ದ ಗೂಢಾಚಾರ ಸೆರೆ

ನವದೆಹಲಿ: ಪಾಕಿಸಸ್ತಾನಕ್ಕೆ ಬೇಹುಗಾರಿಕೆ ಮಾಡುತ್ತಿದ್ದ ಪಾಕಿಸ್ತಾನಿ ಗೂಢಾಚಾರನೊಬ್ಬನನ್ನು ಬಂಧಿಸಲಾಗಿದೆ. ಹಸೀನ್ ಎಂದು ಗುರುತಿಸಲ್ಪಟ್ಟ ಗೂಢಾ ಚಾರ ಪಾಕಿಸ್ತಾನದ ಐಎಸ್‌ಐಗೆ ಭಾರತೀಯ ಫೋನ್ ನಂಬರ್‌ಗಳ ಒನ್-ಟೈಮ್ ಪಾಸ್‌ವರ್ಡ್‌ಗಳನ್ನು (ಒಟಿಪಿ) ಒದಗಿಸಿದ್ದ ಎರಂದು ಆರೋಪಿಸಲಾಗಿದೆ. ಪಾಕಿಸ್ತಾನದಲ್ಲಿ ಹಲವಾರು ಭಾರತೀಯ ಫೋನ್ ನಂಬರ್‌ಗಳನ್ನು ನಿರ್ವಹಿಸಲಾಗುತ್ತಿದೆ ಎಂದು ವರದಿಯಾಗಿದೆ. ಆಪರೇಷನ್‌ ಸಿಂದೂರ್‌ ಅಡಿಯಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ.

ರಾಜಸ್ಥಾನದ ಧರ್ಮಗುರು ನಿವಾಸಿ 34 ವರ್ಷದ ಖಾಸಿಮ್ ಬಂಧಿತ ಆರೋಪಿ. ಅಲ್ಲದೆ ಈತ ಸಹೋದರನ ಮೂಲಕ ಐಎಸ್‌ಐ ಏಜೆಂಟರೊಂದಿಗೆ ಸಂಪರ್ಕ ಸ್ಥಾಪಿಸಿದ್ದಾನೆ. ವಿಚಾರಣೆಯ ಸಮಯದಲ್ಲಿ, ಖಾಸಿಮ್ ತನ್ನ ಸಹೋದರ ಪಾಕಿಸ್ತಾನದ ಐಎಸ್‌ಐಗಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾನೆ ಎಂದು ಬಹಿರಂಗಪಡಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ವಿಚಾರಣೆಯ ಸಮಯದಲ್ಲಿ, ಹಸೀನ್ ಭಾರತೀಯ ಸಂಖ್ಯೆಗಳ ಒಟಿಪಿಗಳನ್ನು ಪಾಕಿಸ್ತಾನ ಮೂಲದ ಪಿಐಒಗಳಿಗೆ ರವಾನಿಸಿದ್ದಾಗಿ ಬಹಿರಂಗಪಡಿಸಿದ್ದಾನೆ. ಇದೇ ಸಂಖ್ಯೆಗಳನ್ನು ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ನಿರ್ವಹಿಸಲು ಬಳಸಿದ್ದಾರೆ. ಭಾರತೀಯ ಅಧಿಕಾರಿಗಳನ್ನು ಹನಿ ಟ್ರ್ಯಾಪ್ ಮಾಡುವ ಉದ್ದೇಶಕ್ಕಾಗಿ ಕೂಡಾ ಇದೇ ಭಾರತೀಯ ಫೋನ್ ಸಂಖ್ಯೆಗಳನ್ನು ಬಳಸಲಾಗಿದೆ ಎನ್ನುವುದು ಬಹಿರಂಗವಾಗಿದೆ.

ದೆಹಲಿ ಪೊಲೀಸ್ ವಿಶೇಷ ಘಟಕವು ಹನಿ ಟ್ರ್ಯಾಪ್‌ಗೆ ಗುರಿಯಾಗಿದ್ದ ಡಿಆರ್‌ಡಿಒ ಅಧಿಕಾರಿಯನ್ನು ಸಂಪರ್ಕಿಸಿದೆ. ಅಲ್ಲದೆ ಹಸೀನ್ ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಲ್ಪಟ್ಟ ಖಾಸಿಮ್‌ನ ಸಹೋದರ ಪ್ರಸ್ತುತ ಇಬ್ಬರನ್ನೂ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ. ಹನೀ ಟ್ರ್ಯಾಪ್ ಸಂಚಿಗೆ ಸಂಬಂಧಿಸಿದಂತೆ ನ್ಯಾಯಾಲಯವು ಖಾಸಿಮ್‌ನನ್ನು ವಶಕ್ಕೆ ಪಡೆದಿದೆ.
ಪಟಿಯಾಲ ಹೌಸ್ ನ್ಯಾಯಾಲಯವು ಆತನನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಖಾಸಿಮ್ ಪಾಕಿಸ್ತಾನದಿಂದ ವಿವಿಧ ಕಂತುಗಳಲ್ಲಿ ಸುಮಾರು 2 ಲಕ್ಷ ಪಾಕಿಸ್ತಾನಿ ರೂಪಾಯಿಗಳನ್ನು (ಸುಮಾರು INR 61,000) ಪಡೆದಿದ್ದಾನೆ ಮತ್ತು ಹಣಕ್ಕೆ ಬದಲಾಗಿ ಗುಪ್ತಚರ ಮಾಹಿತಿಯನ್ನು ಒದಗಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡು ಪ್ರತ್ಯೇಕ ಪೊಲೀಸ್ ತಂಡಗಳು ಇಬ್ಬರೂ ಸಹೋದರರನ್ನು ವಿಚಾರಣೆ ನಡೆಸುತ್ತಿವೆ.

ಏಪ್ರಿಲ್ 22 ರಂದು ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಭಾರತದ ಸೇನೆ ಆಪರೇಷನ್‌ ಸಿಂದೂರ್‌ ಕಾರ್ಯಾಚರಣೆ ನಡೆಸಿ ಪಾಕಿಸ್ತಾನಕ್ಕೆ ನರಕ ದರ್ಶನ ಮಾಡಿಸಿದ್ದು, ಅದರ ಮುಂದುವರಿದ ಭಾಗವಾಗಿ ಜಾಬ್, ಹರಿಯಾಣ, ರಾಜಸ್ಥಾನ, ಗುಜರಾತ್ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಅನೇಕ ಪಾಕಿಸ್ತಾನಿ ಗೂಢಚಾರರನ್ನು ಬಂಧಿಸಲಾಗುತ್ತಿದೆ.

error: Content is protected !!