ತಿರುವನಂತಪುರಂ: ಪ್ರೇಯಸಿ, ಸೋದರ ಮತ್ತು ಸಂಬಂಧಿಕರನ್ನು ಹತ್ಯೆ ಮಾಡಿ ಜೈಲು ಸೇರಿರುವ ಆರೋಪಿ ಅಫಾನ್ ಇಲ್ಲಿನ ಪೂಜಾಪುರ ಕೇಂದ್ರ ಕಾರಾಗೃಹದೊಳಗೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಜಿಲ್ಲೆಯ ವೆಂಜರಮೂಡು ಎಂಬಲ್ಲಿ ಕಳೆದ ಫೆಬ್ರವರಿ 24 ರಂದು ಘಟನೆ ನಡೆದಿತ್ತು. ಅಫಾನ್ ತನ್ನ ಕಿರಿಯ ಸೋದರ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಗೆಳತಿ ಫರ್ಸಾನಾಳನ್ನು ಕೊಲೆ ಮಾಡಿ ಬಳಿಕ ಪೊಲೀಸರಿಗೆ ಶರಣಾಗಿದ್ದ.
ಇಂದು ಅಫಾನ್ ಜೈಲಿನ ಸ್ನಾನಗೃಹದಲ್ಲಿ ಧೋತಿಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಆತನನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.