ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲೇ 32 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು ಒಬ್ಬರು ಬಲಿಯಾಗಿದ್ದಾರೆ. ಈ ಮಧ್ಯೆ ಕೋಡಿಮಠದ ಡಾ.ಶಿವಯೋಗಿ ಶಿವಾನಂದ ಸ್ವಾಮೀಜಿಯವರು ನುಡಿದಿರುವ ಭವಿಷ್ಯ ಹೊಸ ಆತಂಕಕ್ಕೆ ಕಾರಣವಾಗಿದೆ. ʼಹೊಸ ರೋಗ ಬರುವ ಸೂಚನೆ ಇದೆ. ಇದು ಐದು ವರ್ಷಗಳವರೆಗೆ ಇರುತ್ತೆ. ಈ ರೋಗ ಮತ್ತೊಂದು ರೂಪವನ್ನು ತಾಳಲಿದೆ. ಈ ಬಾರಿ ವಾಯು ರೂಪದಲ್ಲಿ ಈ ರೋಗ ಬರುತ್ತೆ. ವಾಯುಮಾಲಿನ್ಯ ಆಗಿದೆ. ಭೂಮಾಲಿನ್ಯ ಆಗಿದೆ, ಜಲಮಾಲಿನ್ಯವೂ ಆಗಿದೆ. ಯಾವುದೂ ನಮಗೆ ಒಳ್ಳೆ ರೀತಿಯಲ್ಲಿ ಸಿಕ್ತಿಲ್ಲʼ ಎಂದು ಕೋಡಿಶ್ರೀ ಹೇಳಿದ್ದಾರೆ.
ʻಈ ಬಾರಿ ಬರುವಂತಹ ಖಾಯಿಲೆ ಭಯಾನಕವಾಗಿದೆ. ವಾಯುರೂಪದಲ್ಲಿ ಕಫ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಲಿವೆ. ಉಸಿರಾಟಕ್ಕೆ ತೊಂದರೆಯಾಗಿ ಸಾವು ಬರುವ ಲಕ್ಷ್ಮಣಗಳಿವೆ. ಈ ಗಂಡಾಂತರ ಇಡೀ ಲೋಕಕ್ಕೇ ಇದೆ. ಇದರ ಆಯಸ್ಸು ಐದು ವರ್ಷ ಇರಬಹುದು. ಮಧ್ಯದಲ್ಲಿ ಕಡಿಮೆಯಾಗಿ ಮತ್ತೆ ಹೆಚ್ಚಾಗಬಹುದು ಎಂದು ಹೇಳಿದ್ದಾರೆ.