ಮಂಗಳೂರು: ಸಂಬಂಧಿಗಳ ಜಗಳ ಕೊಲೆಯಲ್ಲಿ ಅಂತ್ಯ, ಚೂರಿಯಿಂದ ಇರಿದು ವ್ಯಕ್ತಿಯ ಬರ್ಬರ ಹತ್ಯೆ!!

 

ಮಂಗಳೂರು: ಮದುವೆ ವಿಚಾರದಲ್ಲಿ ಗಲಾಟೆ ನಡೆದು ವ್ಯಕ್ತಿಯನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಮಂಗಳೂರು ಹೊರವಲಯದ ವಳಚ್ಚಿಲ್ ಬಳಿ ತಡರಾತ್ರಿ ವರದಿಯಾಗಿದೆ. ವಾಮಂಜೂರು ಎದುರುಪದವು ನಿವಾಸಿ ಸುಲೈಮಾನ್(60) ಕೊಲೆಯಾಗಿದ್ದು ಸಂಬಂಧಿ ಮುಸ್ತಾಫ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಸುಲೈಮಾನ್​ ಪುತ್ರರಾದ ರಿಯಾಬ್​, ಸಿಯಾಬ್​​ ಕೂಡ ಚೂರಿ ಇರಿತಕ್ಕೆ ಒಳಗಾಗಿದ್ದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುಸ್ತಫ ಮತ್ತು ಸುಲೈಮಾನ್‌ ಪರಸ್ಪರ ಸಂಬಂಧಿಕರಾಗಿದ್ದು ಮುಸ್ತಫಾ ಮದುವೆ ವಿಚಾರದಲ್ಲಿ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ನಿನ್ನೆ ರಾತ್ರಿ ಮುಸ್ತಫ ಜೊತೆ ಮಾತುಕತೆಗೆ ತನ್ನ ಪುತ್ರರೊಂದಿಗೆ ಸುಲೈಮಾನ್ ಬಂದಿದ್ದು ಈ ವೇಳೆ ಮಾತಿನ ಚಕಮಕಿ ನಡೆದು ಮುಸ್ತಫ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

error: Content is protected !!