“ಧರ್ಮ ಚಾವಡಿ”ತುಳು ಚಿತ್ರದ ಟೀಸರ್ ಬಿಡುಗಡೆ; ಜುಲೈ 11ಕ್ಕೆ ಬಿಡುಗಡೆ

ಮಂಗಳೂರು: “ಧರ್ಮ ದೈವ” ತುಳು ಚಿತ್ರದ ನಿರ್ದೇಶಕರ ಎರಡನೇ ಚಿತ್ರ “ಧರ್ಮ ಚಾವಡಿ” ತುಳು ಚಿತ್ರದ ಟೀಸರ್ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಬಿಡುಗಡೆಗೊಂಡಿದ್ದು ಸಿನಿಮಾ ಹೊಸ ನಿರೀಕ್ಷೆ ಹುಟ್ಟು ಹಾಕಿದೆ. ಸಾಕಷ್ಟು ಜನರು ಇದು ಧರ್ಮ ದೈವದ ಮುಂದುವರೆದ ಭಾಗ ಎಂದು ಭಾವಿಸಿದ್ದರು, ಆದರೆ ಟೀಸರ್ ಬೇರೆಯೇ ರೀತಿಯಲ್ಲಿದ್ದು ಬಹಳಷ್ಟು ಕುತೂಹಲವನ್ನು ಹುಟ್ಟಿಹಾಕಿದೆ.
ಎಂ.ರ್ .ಟಿ ಯುಟ್ಯೂಬ್ ಚಾನೆಲ್ ನಲ್ಲಿ ಟೀಸರ್ ಬಿಡುಗಡೆ ಗೊಂಡಿದೆ.
ಟೀಸರ್ ಬಿಡುಗಡೆ ಸಮಾರಂಭದಲ್ಲಿ ತುಳು ಸಿನಿಮಾ ರಂಗದ ಗಣ್ಯರು ಭಾಗವಹಿಸಿದ್ದರು. ಟೀಸರ್ ಬಗ್ಗೆ ಎಲ್ಲರು ಕುತೂಹಲ ವ್ಯಕ್ತಪಡಿಸಿದ್ದರು. ನಿರ್ದೇಶನ, ಛಾಯಾಗ್ರಹಣ, ಸಂಕಲನ ಹಾಗೂ ಹಿನ್ನೆಲೆ ಸಂಗೀತ, ಕಲರ್ ಗ್ರೇಡಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.
ಮಂಗಳೂರಿನ ಭಾರತ್ ಸಿನಿಮಾಸ್ ನಲ್ಲಿ ನಡೆದ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ನಿರ್ಮಾಪಕ, ನಿರ್ದೇಶಕರಾದ ಪ್ರಕಾಶ್ ಪಾಂಡೇಶ್ವರ ಉದ್ಘಾಟನೆ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಟೀಸರ್ ಬಿಡುಗಡೆಯನ್ನು ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಡೆಸಿಕೊಟ್ಟು ಧರ್ಮ ಚಾವಡಿ ನಿರೀಕ್ಷೆ ಹೆಚ್ಚಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉದ್ಯಮಿ, ಚಲನ ಚಿತ್ರ ನಿರ್ಮಾಪಕ ಅಸ್ತ್ರ ಗ್ರೂಪ್ ನ ಲಂಚು ಲಾಲ್, ಉದ್ಯಮಿ ರಾಧಾಕೃಷ್ಣ ರೈ ಬುಡಿಯಾರ್, ನಿರ್ದೇಶಕ ತ್ರಿಶೂಲ್ ಶೆಟ್ಟಿ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಚೇತನ್ ಮುಂಡಾಡಿ, ಅಕ್ಷಯ ಕಾಲೇಜ್ ನ ಜಯಂತ ನಡುಬೈಲು, ನಿರ್ಮಾಪಕ ಪ್ರತೀಕ್ ಪೂಜಾರಿ, ಎಸ್ ಆರ್ ಎಸ್ ಮಸಾಲ ದ ಮಾಲೀಕರಾದ ಶೈಲೆಂದ್ರ ಎಸ್ ಸುವರ್ಣ, ಬಾಲಕೃಷ್ಣ ಸಾಲ್ಯಾನ್ ನಡುಬೈಲ್, ಧರ್ಮ ಚಾವಡಿ ಚಿತ್ರದ ನಿರ್ಮಾಪಕ ಜಗದೀಶ್ ಅಮೀನ್ ನಡುಬೈಲು, ಮಾಜಿ ಯಕ್ಷಗಾನ ಅಕಾಡೆಮಿಯ ಸದಸ್ಯ ಭಾಸ್ಕರ್ ರೈ ಕುಕ್ಕುವಳ್ಳಿ, ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ, ಯುವ ನಿರ್ದೇಶಕ ಹರ್ಷಿತ್ ಸೋಮೇಶ್ವರ, ಚಿತ್ರದ ಸಹ ನಿರ್ಮಾಪಕ ರವಿ ಸ್ನೇಹಿತ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ನಟ ರಮೇಶ್ ರೈ ಕುಕ್ಕುವಳ್ಳಿ ನೆರವೇರಿಸಿದರು. ಧರ್ಮ ಚಾವಡಿ ಚಿತ್ರ ಜುಲೈ 11ರಂದು ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆಯಾಗಲಿದೆ.

error: Content is protected !!