ದೂರು ನೀಡಿದ್ದಕ್ಕೆ ಅಂಗಡಿಗೆ ದುಷ್ಕರ್ಮಿಯಿಂದ ಬೆಂಕಿ: ಮಾಲಕಿ ಆಸ್ಪತ್ರೆಯಲ್ಲಿ ಮೃ*ತ್ಯು!

ಕಾಸರಗೋಡು: ಪೊಲೀಸರಿಗೆ ದೂರು ನೀಡಿದ್ದ ಕಾರಣಕ್ಕೆ ಯುವತಿಯ ಅಂಗಡಿಗೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿದ್ದರಿಂದ ಆಕೆ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಬೇಡಡ್ಕದಲ್ಲಿ ನಡೆದಿದೆ.  ಬೇಡಡ್ಕ ನಿವಾಸಿ ರಮಿತಾ ( 22) ಮೃತ ಯುವತಿ. ತಮಿಳುನಾಡು ಮೂಲದ ರಾಮಕೃತ (57) ಆರೋಪಿಯಾಗಿದ್ದಾನೆ.

ರಮಿತಾ ಬೇಡಡ್ಕದ ಮನ್ನಡ್ಕ ಎಂಬಲ್ಲಿ ಅಂಗಡಿ ನಡೆಸುತ್ತಿದ್ದಳು. ಆರೋಪಿ ಪಾನಮತ್ತನಾಗಿ ಬಂದು ಆಕೆಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದನು. ಈ ಬಗ್ಗೆ ರಮಿತಾ ಬೇಡಡ್ಕ ಠಾಣಾ ಪೊಲೀಸರಿಗೆ ದೂರು ನೀಡಿದ್ದಳು. ಇದೇ ವೈಷಮ್ಯದಿಂದ ಎ.8ರ ಸಂಜೆ 3 ಗಂಟೆಗೆ ಅಂಗಡಿಯೊಳಗೆ ನುಗ್ಗಿದ ಆರೋಪಿ ಯುವತಿಗೆ ಟಿನ್ನರ್ ಸುರಿದು ಬೆಂಕಿ ಹಚ್ಚಿದ್ದ. ಕೃತ್ಯ ನಡೆಸಿ ಪರಾರಿಯಾಗಲೆತ್ನಿಸಿದ್ದ ಆರೋಪಿಯನ್ನು ನಾಗರಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದರು.

error: Content is protected !!