ಸುರತ್ಕಲ್: ದೊಡ್ಡ ಕೊಪ್ಲ ಮೊಗವೀರ ಮಹಿಳಾ ಮಂಡಳಿಯಿಂದ
ಸುರತ್ಕಲ್ ಬೀಚ್‌ನಲ್ಲಿ ಕಡಲ ಪರ್ಬ ಕಾರ್ಯಕ್ರಮ ಡಿ.29ರಂದು ನಡೆಯಿತು.
ಸಾರ್ವಜನಿಕರಿಗೆ ದೋಣಿ ಸ್ಪರ್ಧೆ, ಬಲೆ ಬೀಸಿ ಮೀನು ಹಿಡಿಯುವುದು ತ್ರೋಬಾಲ್, ವಾಲಿಬಾಲ್, ಹಗ್ಗ ಜಗ್ಗಾಟ ಪಂದ್ಯವನ್ನು ಆಯೋಜಿಸಲಾಗಿತ್ತು. ತುಳುನಾಡಿನ ಸಾಂಪ್ರದಾಯಿಕ ಮೀನು ಖಾದ್ಯ ಸಹಿತ ಆಹಾರ ಮೇಳವು ನಡೆಯಿತು.
ಶಾಸಕ ಡಾ| ಭರತ್ ಶೆಟ್ಟಿ ವೈ. ಅವರು ಭಾಗವಹಿಸಿ ಪ್ರವಾಸೋದ್ಯಮ ಹಾಗೂ ಸ್ಥಳೀಯರಿಗೆ ಬಿಡುವಿನ ಸಂದರ್ಭ ಸಂಭ್ರಮವನ್ನಾಚರಿಸಲು
ಇಂತಹ ಕಾರ್ಯಕ್ರಮ ಆಯೋಜಿಸುವುದು ಶ್ಲಾಘನೀಯ ಎಂದರು.
ಸ್ಥಳೀಯ ಪಾಲಿಕೆ ಸದಸ್ಯೆ ಶೋಭಾ ರಾಜೇಶ್, ದೊಡ್ಡಕೊಪ್ಲ ಮಹಾಸಭಾದ ಪ್ರಮುಖರು, ಮಹಿಳಾ ಸಮಾಜದ ಪದಾಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.