ಮಂಗಳೂರು: ಅಲ್ ಮಸ್ಥಿದುಲ್ ಬದ್ರಿಯಾ ಜುಮಾ ಮಸ್ಜಿದ್ ಬದ್ರಿಯಾನಗರ ಮಲ್ಲೂರು ಇದರ ಆಡಳಿತ ಸಮಿತಿ ವತಿಯಿಂದ ವರ್ಷಂಪ್ರತಿ ನಡೆಸಲ್ಪಡುತ್ತಿರುವ 38ನೇ ಸ್ವಲಾತ್ ವಾರ್ಷಿಕದ ಹಾಗೂ 8ನೇ ವರುಷದ ಮಜ್ಲಿಸುನ್ನೂರ್ ಕಾರ್ಯಕ್ರಮ ಇದೇ ಜನವರಿ 9ರಿಂದ 12ರವರೆಗೆ ನಡೆಯಲಿದೆ. ಪ್ರಥಮ ದಿನ ಜನವರಿ 9ರಂದು ಗುರುವಾರ ಬೆಳಿಗ್ಗೆ 9 ಗಂಟೆಗೆ ಮಸ್ಕಿದ್ ಆವರಣದಲ್ಲಿ ಆಡಳಿತ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಅಶ್ರಫ್ ರವರು ಧ್ವಜಾರೋಹಣ ಗೈಯುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅದೇ ದಿನ ಮಗ್ರಿಬ್ ನಮಾಜ್ ನಂತರ ಮದರಸ ಹಳೇ ವಿದ್ಯಾರ್ಥಿಗಳಿಂದ ಕಲಾ ಸಾಹಿತ್ಯ ಸ್ಪರ್ಧೆ ನಡೆಯಲಿದ್ದು ಇಶಾ ನಮಾಜ್ ನಂತರ ಬಹು ಇರ್ಶಾದ್ ದಾರಿಮಿ ಮಿತ್ತಬೈಲ್ ಇವರು ಕಾರ್ಯಕ್ರಮವನ್ನು
ಉದ್ಘಾಟಿಸಲಿದ್ದಾರೆ.ಮುಖ್ಯ ಪ್ರಭಾಷಣ ಗಾರರಾದ ಯು.ಕೆ.ಮುಹಮ್ಮದ್ ಹನೀಫ್ ನಿಝಾಮಿ ಅಲ್- ಮುರ್ಷಿದಿ ಮೊಗ್ರಾಲ್ ಇವರಿಂದ ಮತ ಪ್ರಭಾಷಣ ನಡೆಯಲಿದ್ದು ಸ್ಥಳೀಯ ಖತೀಬರಾದ ಬಹು ಶಮೀರ್ ದಾರಿಮಿ ಮಾಡಾವು ಇವರು ಅತಿಥಿಗಳನ್ನು ಸ್ವಾಗತಿಸಲಿದ್ದಾರೆ.
ಜನವರಿ 10 ರಂದು ಶುಕ್ರವಾರ ಅಸರ್ ನಮಾಜಿನ ಬಳಿಕ ನೂರುಲ್ ಹುದಾ ಮದರಸ ಬದ್ರಿಯಾನಗರ ವಿಧ್ಯಾರ್ಥಿಗಳಿಂದ ಅಲ್ ನಜಾಹ್ ಆರ್ಟ್ ಫೆಸ್ಟ್ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಬಹು ಮುಹಮ್ಮದ್ ಅಝ್ಹರ್ ಫೈಝಿ (ಬೊಳ್ಳೂರ್ ಉಸ್ತಾದ್) ನೆರವೇರಿಸಲಿದ್ದಾರೆ. ನೂರುಲ್ – ಹುದಾ ಮದರಸದ ಸದರ್ ಮುಅಲ್ಲಿಮರಾದ ಬಹು! ಅಬ್ದುಲ್ ರಹಮಾನ್ ಯಮಾನಿ ಮಾಡನ್ನೂರ್ ಇವರು ಅತಿಥಿಗಳನ್ನ
ಸ್ವಾಗತಿಸಲಿದ್ದಾರೆ.
ಜನವರಿ 11 ರಂದು ಅಸರ್ ನಮಾಜಿನ ಬಳಿಕ ಸಮಸ್ತ ಕೇರಳ ಜಂ- ಇಯ್ಯತ್ತುಲ್ ಉಲಮಾ ಇದರ ಗೌರವಾನ್ವಿತ ಅಧ್ಯಕ್ಷರಾದ ಸಯ್ಯದುಲ್- ಉಲಮಾ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಞಳ್ ರವರು ತಮ್ಮ ದಿವ್ಯ ಹಸ್ತದಿಂದ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಮಗ್ರಿಬ್ ನಮಾಜ್ ನಂತರ ಇಶ್- ಮಜ್ಜಿಸ್ ನಡೆಯಲಿದ್ದು ಬಹುಮಾನ್ಯರಾದ ಅನ್ವರ್ ಅಲೀ ಹುದವಿ ಕೇರಳ ಇವರು ನೇತೃತ್ವ ವಹಿಸಲಿದ್ದಾರೆ ರಾತ್ರಿ 9-30 ಕ್ಕೆ ನಹತ-ಶರೀಫ್ ಕಾರ್ಯಕ್ರಮವಿದ್ದು ಕರುನಾಡ ಮಣ್ಣಿಗೆ ಪ್ರಪ್ರಥಮ ಬಾರಿ ಆಗಮಿಸುತ್ತಿರುವ ನೂರಿ ಮಿಯಾನ್ ಅಹ್ಮದ್ ರಾಝ್ ಇವರಿಂದ ನಡೆಯಲಿದೆ.
ಜನವರಿ 12 ರಂದು ಮಗ್ರಿಬ್ ನಮಾಜಿನ ನಂತರ 38ನೇ ಸ್ವಲಾತ್ ವಾರ್ಷಿಕ ಹಾಗೂ 8ನೇ ಮಜ್ಜಿಸುನ್ನೂರ ಐತಿಹಾಸಿಕ ಮಜ್ ಲಿಸ್ ನಡೆಯಲಿದೆ . ಕರ್ನಾಟಕ ರಾಜ್ಯ ಸರಕಾರದ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಬಿ.ಝಡ್. ಝಮೀರ್ ಅಹಮದ್ ಖಾನ್ ರವರು ಭಾಗವಹಿಸುತ್ತಿದ್ದು . ಕರ್ನಾಟಕ ಪ್ರದೇಶ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿಯಾದ ಜನಾಬ್ ಇನಾಯತ್ ಅಲಿಯವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಅಲ್ಲದೆ ನಾಲ್ಕು ದಿನದ ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರೂ,ಧಾರ್ಮಿಕ ಪಂಡಿತರೂ ಈ
ಪ್ರದೇಶದ ಜಮಾಅತಿನ ಮುತವಲ್ಲಿಗಳು ಕೂಡ ಭಾಗವಹಿಸುತ್ತಿದ್ದಾರೆಂದು ಅಧ್ಯಕ್ಷರಾದ ಮುಹಮ್ಮದ್ ಅಶ್ರಫ್ ರವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಮಲ್ಲೂರು ಗ್ರಾಮ ಪಂಚಾಯತದ ಮಾಜಿ ಅಧ್ಯಕ್ಷರಾದ MK ಯೂಸೂಫ್, ಸ್ಥಳೀಯ ಖತೀಬರಾದ ಬಹು ಶಮೀರ್‌ದಾರಿಮಿ ಮಾಡಾವು, ಜಮಾಅತಿನ ಮಾಜಿ ಅಧ್ಯಕ್ಷರುಗಳಾದ AK ಉಸ್ಮಾನ್, ಮುಹಮ್ಮದ ಅಸ್ರಾರುದ್ದೀನ್ ಹಾಗೂ ಉಪಾಧ್ಯಕ್ಷರಾದ ಮುಸ್ತಫಾ ದೆಕ್ಕಳ ಮತ್ತಿತರರು ಉಪಸ್ಥಿತರಿದ್ದರು.