ಮಂಗಳೂರು: ರೈತರು ಆತ್ಮಹತ್ಯೆ ಮಾಡಿಕೊಳ್ಳದ ಜಿಲ್ಲೆ ಏನಾದರೂ ಇದ್ದರೆ ಅದು ದಕ್ಷಿಣ ಕನ್ನಡ ಜಿಲ್ಲೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಸಂಘಗಳ ಅಧ್ಯಕ್ಷರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು. ಅವರು ಸ್ಥಳಾಂತರಗೊಂಡ ಕೋಡಿಕಲ್ ಶಾಖೆಯನ್ನು ಉದ್ಘಾಟಿಸಿ ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.
“ನಮ್ಮ ಎಸ್ ಸಿಡಿಸಿಸಿ ಬ್ಯಾಂಕ್ ಮೊಲಹಳ್ಳಿ ಶಿವರಾಯಾರಿಂದ ಪ್ರಾರಂಭಗೊಂಡು 123 ಶಾಖೆಗಳಿವೆ. ನಾವು ರೈತರಿಗೆ ಅವರಿಗೆ ಬೇಕಾದ ಸಮಯದಲ್ಲಿ ಕೃಷಿ ಸಾಲಗಳನ್ನು ಕೊಡುತ್ತಿದ್ದೇವೆ. ಅದರಿಂದ ಅವರಿಗೆ ಸಹಾಯವಾಗಿದೆ. ಈಗ
2011 ರಲ್ಲಿ ಪ್ರಾರಂಭಗೊಂಡ ಕೋಡಿಕಲ್ ಶಾಖೆ ಉರ್ವಾ ಮಾರಿಗುಡಿ ರಸ್ತೆಯ ಜನನನಿಬಿಡ ಪ್ರದೇಶದಲ್ಲಿ ಸ್ಥಳಾಂತರಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯು ಶೇಕಡಾ ನೂರರಷ್ಟು ಸಾಲ ಮರುಪಾವತಿ ಜಿಲ್ಲೆಯಾಗಿದೆ “ಎಂದರು.
ಈ ಸಂದರ್ಭದಲ್ಲಿ ಸ್ಥಳಿಯ ಕಾರ್ಪೋರೇಟರ್ ಗಣೇಶ್ ಕುಲಾಲ್, ಕಟ್ಟಡದ ಮಾಲಿಕ ಶಿವಪ್ರಸಾದ್ ಕಟ್ಟ, ಮೂಡ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಶಶಿಕುಮಾರ್ ರೈ ಬೊಲ್ಯೊಟ್ಟು, ಸಿಇಓ ಗೋಪಿನಾಥ್ ಭಟ್ ಮತ್ತಿತರರು ಉಪಸ್ಥಿತರಿದ್ದರು