ಮಂಗಳೂರು: ವಿದ್ಯುತ್ ತಂತಿ ಸ್ಪರ್ಶಗೊಂಡು ರಿಕ್ಷಾ
ಚಾಲಕರಿಬ್ಬರು ದಾರುಣ ಸಾವನ್ನಪ್ಪಿದ ಘಟನೆ ಇಂದು
ಬೆಳಗ್ಗೆ ನಗರದ ರೊಸಾರಿಯೊ ಶಾಲೆಯ ಬಳಿ ನಡೆದಿದೆ.
ರಾಜು ಮತ್ತು ದೇವರಾಜು ಮೃತಪಟ್ಟರಿಕ್ಷಾ ಚಾಲಕರು .
ಇವರಲ್ಲಿ ಒಬ್ಬರು ಪುತ್ತೂರು ಹಾಗೂ ಇನ್ನೊಬ್ಬರು
ಸಕಲೇಶಪುರದವರು ಎಂದು ತಿಳಿದು ಬಂದಿದೆ. ಇಬ್ಬರೂ
ಪಾಂಡೇಶ್ವರದ ರೊಸಾರಿಯೋ ಚರ್ಚ್ ಹಿಂಬದಿಯ
ಬಾಡಿಗೆಕೊಠಡಿಯಲ್ಲಿ ವಾಸವಾಗಿದ್ದರು. ರಿಕ್ಷಾ ತೊಳೆಯಲು ಬಂದಾಗ ದುರ್ಘಟನೆ ಸಂಭವಿಸಿದೆ.