ಶಿಬರೂರು ನೂತನ ದ್ವಾರಕ್ಕೆ ಶಿಲಾನ್ಯಾಸ

ಸುರತ್ಕಲ್: ಕಟೀಲು ಉಲ್ಲಂಜೆ ಕ್ರಾಸ್ ಬಳಿ ಸುಧಾಕರ ಶೆಟ್ಟಿ ಮೊಗ್ರೋಡಿ ಕನ್ ಸ್ಟ್ರಕ್ಷನ್ ಸೇವಾರೂಪವಾಗಿ ನಿರ್ಮಿಸುತ್ತಿರುವ ನೂತನ ಸ್ವಾಗತ ಗೋಪುರದ ಶಿಲಾನ್ಯಾಸ ಕಾರ್ಯಕ್ರಮ ಮಂಗಳವಾರ ಬೆಳಗ್ಗೆ ನೆರವೇರಿತು.
ಧಾರ್ಮಿಕ ವಿಧಿ ವಿಧಾನವನ್ನು ಶಿಬರೂರು ವೇದವ್ಯಾಸ ತಂತ್ರಿಯವರು ನೆರವೇರಿಸಿದರು.

ಬಳಿಕ ಮಾತಾಡಿದ ಅವರು, “ಮೊಗ್ರೋಡಿ ಕನ್ ಸ್ಟ್ರಕ್ಷನ್ ಸಂಸ್ಥೆಯು ಕಟೀಲು ಶ್ರೀದೇವಿಯ ಉತ್ಸವ ಸಂದರ್ಭದಲ್ಲಿ ಕೊಡಮಣಿತ್ತಾಯ ದೈವದ ಭೇಟಿಗೆ ತೆರಳುವ ದಾರಿಯಲ್ಲಿ ಭವ್ಯವಾದ ಸ್ವಾಗತ ಗೋಪುರ ನಿರ್ಮಿಸಲು ಮುಂದಾಗಿರುವುದು ಸಂತಸದ ವಿಚಾರ. ಸೇವಾಕರ್ತರ ಇಚ್ಛೆಯಂತೆ ಏಪ್ರಿಲ್ 20ರ ವಾರ್ಷಿಕ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಗೋಪುರ ಲೋಕಾರ್ಪಣೆಗೊಳ್ಳಲಿ. ಭಗವದ್ಭಕ್ತರ ಆಸೆಯನ್ನು ಕಟೀಲು ದುರ್ಗೆ ಹಾಗೂ ಶಿಬರೂರು ಕೊಡಮಣಿತ್ತಾಯ ದೈವ ಈಡೇರಿಸಲಿ” ಎಂದರು.
ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕರಾದ ಹರಿನಾರಾಯಣ ದಾಸ ಅಸ್ರಣ್ಣರು ಸೇವಾಕರ್ತರು ಹಾಗೂ ಇಂಜಿನಿಯರ್ ಗಳಿಗೆ ಪೂಜಾ ಪ್ರಸಾದ ವಿತರಿಸಿ ಶುಭಾಶೀರ್ವಾದಗೈದರು.
ಈ ಸಂದರ್ಭದಲ್ಲಿ ಶಿಬರೂರು ಗುತ್ತಿನಾರ್ ಉಮೇಶ್ ಎನ್ ಶೆಟ್ಟಿ, ಪ್ರದ್ಯುಮ್ನ ರಾವ್ ಕೈಯೂರುಗುತ್ತು, ತುಕರಾಮ ಶೆಟ್ಟಿ ಪರ್ಲಬೈಲ್ ಗುತ್ತು, ಜಿತೇಂದ್ರ ಶೆಟ್ಟಿ ಕೋರ್ಯಾರು ಗುತ್ತು, ಚಂದ್ರಹಾಸ್ ಶಿಬರೂರು, ವಿನೀತ್ ಶೆಟ್ಟಿ ಕೋರ್ಯಾರು ಹೊಸಮನೆ, ಮುಗ್ರೋಡಿ ಸೇವಾಕರ್ತರಾದ ಸುಶಾಂತ್ ಶೆಟ್ಟಿ, ಸುಧಾಕರ ಶಿಬರೂರು, ಇಂಜಿನಿಯರ್ ಸುಬ್ರಮಣ್ಯ, ವಿಜಯರಾಜ್, ದಿನೇಶ್ ಕುಲಾಲ್ ಅಡು ಮನೆ, ರಾಜೇಶ್ ಕುಲಾಲ್, ಪ್ರಭಾಕರ ಶೆಟ್ಟಿ ಹೊಸಕಟ್ಟ, ದೇವಿಪ್ರಸಾದ್ ಶೆಟ್ಟಿ ಕೊಡೆತ್ತೂರು ಹೊಸಮನೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!