ಮಂಗಳೂರು: ನಟೋರಿಯಸ್ ರೌಡಿಶೀಟರ್ ಆಕಾಶಭವನ ಶರಣ್ ಎರಡು ದಿನಗಳ ಹಿಂದೆ ಮೇರಿಹಿಲ್ ಬಳಿ ತನ್ನನ್ನು ಬಂಧಿಸಲು ಬಂದಿದ್ದ ಪೊಲೀಸರ ಮೇಲೆ ಕಾರ್ ಹಾಯಿಸಿ ತಪ್ಪಿಸಿಕೊಂಡಿದ್ದು ಇಂದು ಸಂಜೆ ಜೆಪ್ಪು ಕುದ್ಪಾಡಿ ಬಳಿ ಆತ ಸಂಚರಿಸುತ್ತಿದ್ದ ಮಾಹಿತಿ ಆಧಾರದಲ್ಲಿ ಕಾರ್ ಬೆನ್ನಟ್ಟಿದ ಪೊಲೀಸರು ಆತ ತಪ್ಪಿಸಿಕೊಳ್ಳಲು ಮುಂದಾಗುತ್ತಿದ್ದಂತೆ ಕಾಲಿಗೆ ಗುಂಡಿಕ್ಕಿ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಶರಣ್ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ 21ಕ್ಕೂ ಹೆಚ್ಚು ಕೇಸ್ ಗಳಿದ್ದು ಸುಳ್ಯ ರಾಮಕೃಷ್ಣ ಕೊಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿದ್ದ.