ಸುರತ್ಕಲ್: ಬೈಕ್ ಅಪಘಾತದಲ್ಲಿ ಕಾಲೇಜ್ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡಿರುವ ಘಟನೆ ಮುಕ್ಕ ರಾಷ್ಟ್ರೀಯ ಹೆದ್ದಾರಿ 66ರ ಪಡ್ರೆ ದ್ವಾರದ ಬಳಿ ನಡೆದಿದೆ.
ಗಾಯಗೊಂಡವರನ್ನು ಮುಕ್ಕ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಎಂ.ಸಿ. ಫಾರೂಕ್ ಎಂದು ತಿಳಿದು ಬಂದಿದ್ದು, ಮುಕ್ಕ ಶ್ರೀನಿವಾಸ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಹೊಸಬೆಟ್ಟು ನಿವಾಸಿ ವೈಭವ್ ವಿಶ್ವನಾಥ್ ಬಂಜನ್ ಸ್ಥಳದಲ್ಲೇ ಮೃತಪಟ್ಟವರು ಎಂದು ತಿಳಿದು ಬಂದಿದೆ.
ಯುವಕ ಮನೆಯಿಂದ ಮುಕ್ಕದ ಕಾಲೇಜಿಗೆ ತೆರಳುತ್ತಿದ್ದ ವೇಳೆ ಗಾಯಾಳು ಫಾರೂಕ್ ಅವರು ಪೆಟ್ರೋಲ್ ಖಾಲಿಯಾಗಿದ್ದ ಆಕ್ಟಿವಾವನ್ನು ಮುಕ್ಕ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿ ರಸ್ತೆ ದಾಟಿ ಪೆಟ್ರೋಲ್ ಹಿಡಿದುಕೊಂಡು ಹೆದ್ದಾರಿ ದಾಟುತ್ತಿದ್ದ ವೇಳೆ ಕೆಟಿಎಂ ಬೈಕ್ ನಲ್ಲಿ ಬರುತ್ತಿದ್ದ ವೈಭವ್ ಅವರು ಡಿಕ್ಕಿ ಹೊಡೆದಿದ್ದ. ವೈಭವ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.