ಸುರತ್ಕಲ್: ಪಚ್ಚನಾಡಿ ಪರ್ಬ ಸ್ಥಾಪಕ ಸಮಿತಿ ಇದರ ಆಶ್ರಯದಲ್ಲಿ ಪಚ್ಚನಾಡಿ ಪರ್ಬ 2023 ಇದರ ಚತುರ್ಥ ಹಂತವಾಗಿ ಸಂತೋಷ್ ನಗರ ಸುಸಜ್ಜಿತ ಕ್ರೀಡಾಂಗಣ ಲೋಕಾರ್ಪಣೆ ನಿಮಿತ್ತ ಶ್ರೀ ಅನಂತಪದ್ಮನಾಭ ಫ್ರೆಂಡ್ಸ್ ಕ್ಲಬ್ ಸಂತೋಷ್ ನಗರ ಇವರ ಸಹಭಾಗಿತ್ವದಲ್ಲಿ ಪಂದ್ಯಕೂಟ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಉಪಸ್ಥಿತರಿದ್ದು, ನೂತನ ಸುಸಜ್ಜಿತ ಕ್ರೀಡಾಂಗಣ, ವಿವಿಧ ಮೂಲಭೂತ ಸೌಕರ್ಯಗಳ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ಮಹಾನಗರ ಸ್ಥಾಯಿ ಸಮಿತಿಯ ಅಧ್ಯಕ್ಷರುಗಳಾದ ವರುಣ್ ಚೌಟ, ಲೋಹಿತ್ ಅಮಿನ್, ಸ್ಥಳೀಯ ಕಾರ್ಪೊರೇಟರ್ ಸಂಗೀತ ಆರ್ ನಾಯಕ್ ಹಾಗೂ ಊರಿನ ಬಂಧುಗಳು ಉಪಸ್ಥಿತರಿದ್ದರು.