“ಕೇರಳ ಸ್ಫೋಟ ಅತೀಯಾದ ತುಷ್ಟೀಕರಣ ರಾಜಕಾರಣದ ಪರಿಣಾಮ” -ಡಾ.ವೈ. ಭರತ್ ಶೆಟ್ಟಿ

ಮಂಗಳೂರು: ಓಟ್ ಬ್ಯಾಂಕ್ ರಾಜಕಾರಣ ಹಾಗೂ ಅಲ್ಪಸಂಖ್ಯಾತ ಸಮುದಾಯದ ತುಷ್ಟೀಕರಣದ ಪರಿಣಾಮ ಕೇರಳದಲ್ಲಿ ಬಾಂಬ್ ಸ್ಫೋಟ ಕ್ಕೆ ಕಾರಣ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಹಾಗೂ ಎಡಪಕ್ಷಗಳು ಹಾಗೂ ಮುಸ್ಲಿಂ ಲೀಗ್ ನಂತಹ ಪಕ್ಷಗಳು ಎಡಬಿಡಂಗಿ ನೀತಿಯನ್ನು ಇನ್ನಾದರೂ ನಿಲ್ಲಿಸಬೇಕು. ಕಣ್ಣಿದ್ದು ಕುರುಡನಂತೆ ವರ್ತಿಸಿದರೆ ಮತ್ತಷ್ಟು ಬಾಂಬ್ ಸ್ಫೋಟವಾಗುದು ಖಚಿತ. ಕೇರಳ ಉಗ್ರರ ಸ್ಲೀಪರ್ ಸೆಲ್ ಆಗಿ ಪರಿವರ್ತನೆ ಯಾಗಿದ್ದು ದೇಶದ್ರೋಹಿ ಸಂಘಟನೆಗಳು ಇಲ್ಲಿಂದಲೇ ಕಾರ್ಯಾಚರಿಸುತ್ತಿವೆ.
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಾಗ ಕೇರಳ ಲಿಂಕ್ ಕೇಳಿ ಬಂದಿತ್ತು.

ಇಷ್ಟೆಲ್ಲಾ ಅದರೂ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಉಗ್ರರ ಪರವಾದ ಹೇಳಿಕೆ ನೀಡುತ್ತಲೇ ಬಂದಿತ್ತು ಮಾತ್ರವಲ್ಲ
ರಾಜ್ಯದಲ್ಲಿ ಬೇರೆ ಬೇರೆ ಕಡೆ ನಡೆದ ಹಿಂಸಾಚಾರ ಪ್ರಕರಣದಲ್ಲಿ ಪಾಲ್ಗೊಂಡವರ ಮೇಲಿನ ಕೇಸು ಹಿಂಪಡೆಯಲೂ ಮುಂದಾಗಿದೆ. ಇದೆಲ್ಲಾ ಜಿಹಾದಿ ಮನಸ್ಥಿತಿಯ ಕಿರಾತಕರು ಮತ್ತೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿದ್ದಾರೆ. ಕೂಡಲೇ ಎನ್ ಐ ಎ ತನಿಖೆ ನಡೆಸಬೇಕು.

ಭಾರತ ಇಸ್ರೇಲ್ ಗೆ ಬೆಂಬಲ ನೀಡಿದ ಕಾರಣ ಮುಸ್ಲಿಂ ಜಿಹಾದಿಗಳಿಂದ ಸ್ಫೋಟವಾಯಿತೆ ಎಂಬುದರ ಬಗ್ಗೆ ಕೂಲಂಕುಷ ತನಿಖೆ ಅಗತ್ಯ. ಈ ನಿಟ್ಟಿನಲ್ಲಿ ಇದರ ತನಿಖೆಯನ್ನು ಎನ್ ಐ ಗೆ ಒಪ್ಪಿಸಬೇಕು ಎಂದು ಹೇಳಿಕೆಯಲ್ಲಿ ಡಾ.ಭರತ್ ಶೆಟ್ಟಿ ವೈ ಒತ್ತಾಯಿಸಿದ್ದಾರೆ.

error: Content is protected !!