ಸುರತ್ಕಲ್: ವಾಹನದ ದಾಖಲೆ ಪತ್ರ ಮರಳಿ ವಾರಸುದಾರರಿಗೆ

ಸುರತ್ಕಲ್: ಜಯ ಕರ್ನಾಟಕ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ (ರಿ) ಸುರತ್ಕಲ್ ಇದರ ಮಾಜಿ ಅಧ್ಯಕ್ಷರಾದ ಶೇಖರ ಶೆಟ್ಟಿ ಮುಂಚೂರು ಇವರಿಗೆ ದ್ವೀಚಕ್ರ ವಾಹನದ ಮೂಲ ದಾಖಲೆ ಪತ್ರ ತಡಂಬೈಲ್ ಸಮೀಪದ ಮಾರಿಗುಡಿ ದೇವಸ್ಥಾನದ ಬಳಿ ದೊರತಿದ್ದು ಇದನ್ನು ಪರಿಶಿಲಿಸಿದಾಗ ಇದು ಬಜಪೆಯ ಅಸಿಫ್ ಅವರಿಗೆ ಸೇರಿದ್ದು ಎಂದು ತಿಳಿದು ಕೂಡಲೇ ಅವರಿಗೆ ಕರೆ ಮಾಡಿ ಸುರತ್ಕಲಿಗೆ ಬರಹೇಳಿ ಮೂಲ ದಾಖಲೆ ಪತ್ರವನ್ನು ಹಿಂದಿರುಗಿಸಿರುತ್ತಾರೆ. ಶೇಖರ ಶೆಟ್ಟಿ ಮತ್ತು ತಂಡ ಈ ಹಿಂದೆಯೂ ರಿಕ್ಷಾದಲ್ಲಿ ಬಿಟ್ಟು ಹೋದ ದಾರಿಯಲ್ಲಿ ಸಿಕ್ಕ ಹಲವಾರು ಬೆಳೆಬಾಳುವ ವಸ್ತುಗಳನ್ನು ವಾರಿಸುದಾರರಿಗೆ ಹಿಂದಿರುಗಿಸಿ ಪ್ರಶಂಸೆಗೆ ಪಾತ್ರರಾಗಿದ್ದರು. ದಾಖಲೆ ಪತ್ರ ಅಸಿಫ್ ಅವರಿಗೆ ಹಿಂತಿರುಗಿಸುವ ವೇಳೆಯಲ್ಲಿ ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ದಯಾನಂದ ಶೆಟ್ಟಿ ಕಡಂಬೋಡಿ ,ಮಾಜಿ ಅಧ್ಯಕ್ಷ ಅಪ್ಪುಸ್ವಾಮಿ ಉಪಸ್ಥಿತರಿದ್ದರು.

error: Content is protected !!