ಮಂಗಳೂರು: ಯುವಕನೊಬ್ಬ ಯುವತಿಯೋರ್ವಳ ಕತ್ತು ಕೊಯ್ದು ಕೊಲೆಗೈದ ಘಟನೆ ಇಂದು ಸಂಜೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ನಡೆದಿದೆ.
ರಸ್ತೆಯಲ್ಲಿ ಯುವತಿಯನ್ನು ತಡೆದ ಯುವಕ ಯದ್ವಾತದ್ವಾ ಚೂರಿಯಿಂದ ಇರಿದು ಪರಾರಿಯಾಗಿದ್ದು ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಯುವಕನನ್ನು ಪದ್ಮರಾಜ್ ಎಂದು ಗುರುತಿಸಲಾಗಿದೆ. ಮೃತ ಯುವತಿಯನ್ನು ವಿಟ್ಲದ ಅಳಿಕೆ ಮೂಲದ ಗೌರಿ (20 ವ.) ಎಂದು ಗುರುತಿಸಲಾಗಿದೆ. ಪ್ರೇಮ ಪ್ರಕರಣ ಹಿನ್ನೆಲೆಯನ್ನು ಶಂಕಿಸಲಾಗಿದೆ.