ಸುರತ್ಕಲ್: ಮೇಲ್ಮನೆ ಸುರತ್ಕಲ್ ವತಿಯಿಂದ ಆಟಿದ ಕೂಟ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಮೇಲ್ಮನೆ ಸದಸ್ಯರೆಲ್ಲರೂ ಸೇರಿ ಜತನದಿಂದ ಕಾಪಾಡಿಕೊಂಡು ಬಂದಿರುವ ಪುರಾತನ ಕಾಲದಲ್ಲಿ ಪೂರ್ವಜರು ಉಪಯೋಗಿಸುತ್ತಿದ್ದ ವಸ್ತುಗಳನ್ನು ಜೋಡಿಸಿಕೊಂಡು ಸಾಂಪ್ರದಾಯಿಕ ಶೈಲಿಯಲ್ಲಿ ಸಿಂಗರಿಸಿದ್ದರು.
ಸ್ಥಳೀಯ ಹಿರಿಯರಾದ ಸುಹಾಸಿನಿ, ರತ್ನ, ವಾಸಂತಿ, ಯಮುನಾ, ಸರಸು ಅವರು ಈ ಸಂದರ್ಭದಲ್ಲಿ ಆಟಿ ಆಚರಣೆಯ ಬಗ್ಗೆ ವಿವರಿಸಿದರು. ಅವರನ್ನು ಮೇಲ್ಮನೆಯ ವತಿಯಿಂದ ಶಾಲು ಹೊದೆಸಿ, ಹೂಗುಚ್ಛ ನೀಡಿ ಗೌರವಿಸಿ ಅಭಿನಂದಿಸಲಾಯಿತು.
ಆನಂತರ ಎಲ್ಲರೂ ಸೇರಿ ತಯಾರಿಸಿದ 38 ಬಗೆಯ ಆಟಿ ತಿಂಗಳಲ್ಲಿ ವಿಶೇಷವಾಗಿ ತಯಾರಿಸಲಾಗುವ ತಿನಿಸುಗಳನ್ನು ಸವಿದರು.
ಹಿರಿಯರಾದ ಲಕ್ಷ್ಮಿ, ರಾಜೀವಿ, ಯಮುನಾ, ಗೀತಾ ನರೇಂದ್ರ, ಶುಭಾ ಲೋಕೇಶ್, ರೋಹಿಣಿ ವಿಶ್ವನಾಥ್, ವಾರಿಜಾ ಹಾಗೂ ಮತ್ತಿತರರು ಹಾಗೂ ಮಕ್ಕಳು, ಮೊಮ್ಮಕ್ಕಳು ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದರು.