ಬಡಕುಟುಂಬಗಳ ಮನೆ ದುರಸ್ತಿ ಮಾಡಿದ ಶ್ರೀ ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ!

ಕಿನ್ನಿಗೋಳಿ: ಜಿಲ್ಲಾ ಪ್ರಶಸ್ತಿ ವಿಜೇತ, ಸಾಧನಾ ರಾಜ್ಯ ಪ್ರಶಸ್ತಿ ಹಾಗೂ ಕರ್ನಾಟಕ ಸಂಘ ರತ್ನ ಪ್ರಶಸ್ತಿ ಪುರಸ್ಕೃತ ಶ್ರೀ ವಿನಾಯಕ ಮಿತ್ರ ಮಂಡಳಿ (ರಿ) ಪಕ್ಷಿಕೆರೆ ಇದರ ಸದಸ್ಯರು ಎರಡು ಬಡಕುಟುಂಬಗಳಿಗೆ ಸೇರಿದ ಮನೆಯನ್ನು ದುರಸ್ತಿ ಮಾಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.


ವಿನಾಯಕ ಮಿತ್ರಮಂಡಳಿ ನೇತೃತ್ವದಲ್ಲಿ ಯುವಕಾರ್ಯ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರ ಮಂಗಳೂರು ಸಂಯುಕ್ತ ಆಶ್ರಯದಲ್ಲಿ ಆರ್ಥಿಕವಾಗಿ ಹಿಂದುಳಿದ ಎರಡು ಮನೆಗಳ ದುರಸ್ತಿಗಾಗಿ ಅಂತರಾಜ್ಯ ಮಟ್ಟದ ವಾಲಿಬಾಲ್ ಕ್ರೀಡಾಕೂಟ ಏರ್ಪಡಿಸಿತ್ತು.
ಪ್ರಥಮ ಹಂತದಲ್ಲಿ ಕೆಮ್ರಾಲ್ ಕೆರೆಮನೆ ಲೀಲಾವತಿ ಶೆಡ್ತಿ ಇವರ ಮನೆಯ ಮೇಲ್ಛಾವಣಿ ಪೂರ್ತಿ ಬೀಳುವ ಹಂತದಲ್ಲಿದ್ದು ಸುಮಾರು 75,000 ರೂ. ವೆಚ್ಚದಲ್ಲಿ ಹಾಗೂ ಮಂಡಳಿಯ ಸದಸ್ಯರ ಶ್ರಮದಾನದಿಂದ ಮನೆಯನ್ನು ದುರಸ್ತಿಮಾಡಿ ಕೊಡಲಾಯಿತು.

ಈ ಕಾರ್ಯದಲ್ಲಿ ಮಂಡಳಿ ಗೌರವಾಧ್ಯಕ್ಷ ಧನಂಜಯ ಶೆಟ್ಟಿಗಾರ್, ಅಧ್ಯಕ್ಷ ಯತೀಶ್, ಕಾರ್ಯದರ್ಶಿ ಶರತ್ ಹಾಗೂ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.

error: Content is protected !!