“ಕಾಂಗ್ರೆಸ್ ಗ್ಯಾರಂಟಿಯಿಂದ ಜನರ ಜೀವನ ಸುಧಾರಣೆ” -ಇನಾಯತ್ ಅಲಿ

ಸುರತ್ಕಲ್: “ಕಾಂಗ್ರೆಸ್ ತಂದಿರುವ ನಾಲ್ಕು ಗ್ಯಾರಂಟಿಗಳಿಂದ ಜನರ ಜೀವನಮಟ್ಟ ಸುಧಾರಣೆಯಾಗಲಿದೆ. ಜನರು ಬಿಜೆಪಿ ಸರಕಾರದ ಆಡಳಿತದ ಅವಧಿಯಲ್ಲಿ ಸಾಕಷ್ಟು ನಷ್ಟ, ನೋವು ಅನುಭವಿಸಿದ್ದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರುವ ಮೂಲಕ ಜನರು ನೆಮ್ಮದಿಯ ಜೀವನ ಸಾಗಿಸಲು ಅನುಕೂಲಕರವಾಗಲಿದೆ” ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರು ಹೇಳಿದರು.


ಅವರು ಕಾಂಗ್ರೆಸ್‌ ಗ್ಯಾರಂಟಿಗಳ ಕುರಿತು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ವಾಮಂಜೂರು ತಿರುವೈಲ್‌ ವಾರ್ಡ್ ನ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳ ಕುರಿತು ಮಾಹಿತಿ ನೀಡಿದರು. ಈ ವೇಳೆ ರಾಜ್ ಕುಮಾರ್ ಶೆಟ್ಟಿ, ಸ್ಟಾನಿ ಕುಟಿನ್ಹಾ, ಶ್ರೀಧರ್ ಜೋಗಿ, ಯೂಸುಫ್ ಮಲ್ಲೂರು, ಶರೀಫ್ ಉಳಾಯಿಬೆಟ್ಟು, ಮೈಯದಿ, ಯಾಕೂಬ್ ಸೇರಿದಂತೆ ನೂರಾರು ಮಂದಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!