ಸುರತ್ಕಲ್: ಬಿಜೆಪಿ ಎಸ್ ಡಿ ಪಿಐ ಸಖ್ಯ ಹೊಂದಿದೆ ಎಂದು ಆರೋಪಿಸುತ್ತಾ ಬಂದಿರುವ ಕಾಂಗ್ರೆಸ್ ಬಣ್ಣ ಬಯಲಾಗಿದೆ.
ಅವರೇ ಎಸ್ ಡಿ ಪಿವೈ ಪಕ್ಷದ ಜತೆ ಅಧಿಕಾರಕ್ಕಾಗಿ ಒಳ ಒಪ್ಪಂದ ಮಾಡಿಕೊಂಡಿದನ್ನು ಬಂಟ್ವಾಳದಲ್ಲಿ ಎಸ್ ಡಿ ಪಿ ಐ ಪ್ರಧಾನ ಕಾರ್ಯದರ್ಶಿಯೇ ಬಹಿರಂಗ ಪಡಿಸಿದ್ದು, ಮತದಾರರ ಮುಂದೆ ರಾಷ್ಟ್ರೀಯ ಪಕ್ಷದ ಮುಖವಾಡ ಕಳಚಿಬಿದ್ದಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.
ಬಿಜೆಪಿ ಯಾವತ್ತೂ ರಾಷ್ಟ್ರ ದ್ರೋಹ,ದೇಶದ್ರೋಹಿ ಕೃತ್ಯಗಳಲ್ಲಿ ತೊಡಗುವ,ಹಿಂದೂ ವಿರೋಧಿ ಸಂಚು ಮಾಡುವ ಯಾವುದೇ ಪಕ್ಷದ ಜತೆ ಒಪ್ಪಂದ ಹಿಂದೆಯೂ ಮಾಡಿಕೊಂಡಿಲ್ಲ .ಮುಂದೆಯೂ ಇದು ಅಸಾಧ್ಯ. ಕೇವಲ ಅಧಿಕಾರದ ಆಸೆಯಿಂದ ಕಾಂಗ್ರೆಸ್ ನಂತಹ ಪಕ್ಷಗಳು ಎಷ್ಟೇ ಕೆಳಮಟ್ಟಕ್ಕೆ ಹೋಗಲು ಸಿದ್ದವಿದೆ ಎಂಬುದನ್ನು ಸಾಬೀತು ಪಡಿಸಿದೆ.ಈ ಬಾರಿ ಮತದಾರರು ರಾಷ್ಟ್ತದ್ರೋಹ,ದೇಶ ವಿರೋಧಿ ಚಟುವಟಿಕೆಗಳನ್ನು ಮಾಡುವ ,ಅದನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ಸೂಕ್ತ ಪಾಠ ಕಲಿಸಲಿದ್ದಾರೆ.ಕಾಂಗ್ರೆಸ್ ತಾನಾಗಿಯೇ ದೇಶದಿಂದ ಮುಕ್ತವಾಗಲಿದೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.