ಹಳೆಯಂಗಡಿ: ಇಲ್ಲಿಗೆ ಸಮೀಪದ ಬೆಳ್ಳಾಯರು ಚಂದ್ರ ಮೌಳೀಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಬೃಹತ್ ಹೊರೆ ಕಾಣಿಕೆ ಸಮರ್ಪಣಾ ಕಾರ್ಯಕ್ರಮ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ನಡೆಯಿತು.
ದೇವಸ್ಥಾನದ ಅರ್ಚಕರಾದ ನರಸಿಂಹ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು ಹಾಗೂ ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ ಹೊರೆ ಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.
ಮಾಜೀ ಸಚಿವ ಅಭಯ ಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ,ಮಂಡಲಾಧ್ಯಕ್ಷ ಸುನಿಲ್ ಆಳ್ವ, ಚಂದ್ರ ಮೌಳೀಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪಾದೆಮನೆ ಜಯಂತ ರೈ, ಅನುವಂಶಿಕ ಮೊಕ್ತೇಸರ ಶೇಖರ ತಿಮ್ಮಯ ಶೆಟ್ಟಿ, ಉಪಾಧ್ಯಕ್ಷ ಅಕ್ಷಯ್ ಭಟ್, ದಿನೇಶ್ ಕೋಲ್ನಾಡ್ ಕಾರ್ಯಾಧ್ಯಕ್ಷರಾದ ವಿಜಯಶೆಟ್ಟಿ ಕೋಲ್ನಾಡು, ವಿದ್ಯಾಧರ್ ಶೆಟ್ಟಿ ಕೋಲ್ನಾಡು ಗುತ್ತ, ವಿನೋದ್ ಸಾಲ್ಯಾನ್,ರಾಮಚಂದ್ರ ನಾಯಕ್ ಕೋಲ್ನಾಡುಗುತ್ತು, ಕೃಷ್ಣ ರಾವ್, ಪದ್ಮನಾಭ ಶೆಟ್ಟಿ, ರೋಹಿಣಿ ಶೆಟ್ಟಿ, ಬಾಬು ಶೆಟ್ಟಿ, ಕೃಷ್ಣ ಶೆಟ್ಟಿ, ಸಂತೋಷ್ ಶೆಟ್ಟಿ ಹೊಸಮನೆ, ನಂದಕಿಶೋರ್ ಶೆಟ್ಟಿ, ಜನಾರ್ನನ ಶೆಟ್ಟಿಗಾರ್, ವಸಂತ್ ಬೆರ್ನಾಡ್, ಮಂಜುನಾಥ ಕಂಬಾರ, ಸವಿತಾ ಶರತ್ ಬೆಳ್ಳಾಯರು,ಜಯಕೃಷ್ಣ ಕೋಟ್ಯಾನ್ ಹಳೆಯಂಗಡಿ, ಮಹಾಬಲ ಸನಿಲ್, ಸುಮಿತ್ರಾ ಶೆಟ್ಟಿ, ಮಾದವ ಎಂ ಶೆಟ್ಟಿ ಉತ್ರಂಜೆ, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ, ರಾಘವ ಸುವರ್ಣ ಕೆಎಸ್ ರಾವ್ ನಗರ, ಹರಿಶ್ಚಂದ್ರ ಕೆಎಸ್ರಾವ್ ನಗರ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ವೈಭವದ ಮೆರವಣಿಗೆ ಬೆಳ್ಳಾಯರು ಚಂದ್ರ ಮೌಳೀಶ್ವರ ದೇವಸ್ಥಾನಕ್ಕೆ ಆಗಮಿಸಿ ದೇವಸ್ಥಾನದ ತಂತ್ರಿಗಳಾದ ಗಳಾದ ದೇರೇ ಬೈಲ್ ಶಿವಪ್ರಸಾದ ತಂತ್ರಿಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಹಾಗೂ ತೋರಣ ಮಹೂರ್ತ ಮತ್ತು ಉಗ್ರಾಣ ಮುಹೂರ್ತ ನಡೆಯಿತು.