ಸುರತ್ಕಲ್ 6ನೇ ವಾರ್ಡ್ ನಲ್ಲಿ ನೂತನ ರಸ್ತೆ ಲೋಕಾರ್ಪಣೆ

ಸುರತ್ಕಲ್: ಕರ್ನಾಟಕ ಸರಕಾರ ಲೋಕೋಪಯೋಗಿ ಇಲಾಖೆಯಿಂದ ಮಂಗಳೂರು ಮಹಾನಗರ ಪಾಲಿಕೆಯ ಇಡ್ಯಾ ಪೂರ್ವ ಆರನೇ ವಾರ್ಡ್ ಕಾಂತೇರಿ ಧೂಮಾವತಿ ದೇವಸ್ಥಾನದಿಂದ ಚಿರಂತನ ವೃದ್ಧಾಶ್ರಮ ಕೂಡುರಸ್ತೆಯನ್ನು 1.25 ಕೋಟಿ ರೂಪಾಯಿ ಅನುದಾನದಲ್ಲಿ ನೂತನ ಕಾಂಕ್ರೀಟೀಕರಣಗೊಳಿಸಲಾಗಿ ದ್ದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವೈ. ಅವರು ಬುಧವಾರ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತಾಡಿದ ಅವರು, “ಈ ರಸ್ತೆ ಬಹುಕಾಲದ ಬೇಡಿಕೆಯಾಗಿದ್ದು ಸ್ಥಳೀಯ ಮನಪಾ ಸದಸ್ಯರ ಶ್ರಮದಿಂದಾಗಿ ಕಾಮಗಾರಿ ಬೇಗನೆ ಮುಗಿದು ಜನರ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ಎರಡು ವರ್ಷ ಕೋವಿಡ್ ಸಂಕಷ್ಟದ ಕಾಲದಲ್ಲೂ ಅಭಿವೃದ್ಧಿ ವಿಚಾರದಲ್ಲಿ ಯಾವ ಕಾರಣಕ್ಕೂ ರಾಜಿ ಮಾಡಿಕೊಂಡಿಲ್ಲ. ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಪಾರ್ಕ್ ನಿರ್ಮಾಣಕ್ಕೆ ಪ್ರತೀ ವಾರ್ಡ್ ನಲ್ಲೂ ಆದ್ಯತೆ ನೀಡಲಾಗಿದೆ” ಎಂದರು.
ಮಂಗಳೂರು ಮೇಯರ್ ಜಯಾನಂದ ಅಂಚನ್, ಕಾರ್ಪೋರೇಟರ್ ಸರಿತಾ ಶಶಿಧರ್, ಮಹೇಶ್ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!