ಮಂಗಳೂರು: ಯುವತಿಯನ್ನು ಆಕೆಯ ಮನೆಯ ಅಂಗಳದಲ್ಲೇ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಪುತ್ತೂರು ತಾಲೂಕಿನ ಮುಂಡೂರು ಬಳಿ ನಡೆದಿದ್ದು ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಇನ್ನು ಚೂರಿಯಿಂದ ಇರಿದ ಯುವಕ ಪರಾರಿಯಾಗಿದ್ದು ಸಂಪ್ಯ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮೇಲ್ನೋಟಕ್ಕೆ ಪ್ರೇಮ ಪ್ರಕರಣ ಶಂಕಿಸಲಾಗಿದೆ.
ಜಯಶ್ರೀ(23) ಚೂರಿ ಇರಿತದಿಂದ ಹತ್ಯೆಯಾದ ಯುವತಿ. ಮುಂಡೂರು ಕಂಪ ನಿವಾಸಿ ಗುರುವಪ್ಪ-ದೇವಕಿ ದಂಪತಿಗಳ ಪುತ್ರಿ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.