ಮೂಲ್ಕಿ ಸೀಮೆ ಅರಸು ಕಂಬಳಕ್ಕೆ ಚಾಲನೆ

ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಅರಸು ಕಂಬಳಕ್ಕೆ ಪಡುಪಣಂಬೂರಿನ ಬಾಕಿ ಮಾರು ಗದ್ದೆಯಲ್ಲಿ ಚಾಲನೆ ನೀಡಲಾಯಿತು.

ಬೆಳಗ್ಗೆ ನಾಗಬನದಲ್ಲಿ ಅತ್ತೂರು ಬೈಲು ವೆಂಕಟರಾಜ ಉಡುಪ ಪೌರೋಹಿತ್ಯದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿ ಬಸದಿಯ ಪದ್ಮಾವತಿ ಅಮ್ಮನ ಸನ್ನಿಧಿಯಲ್ಲಿ ಪೂಜೆ ವಿಧಿ ವಿಧಾನ ನಡೆದು ಕಾಂತಾ ಬಾರೆ ಬೂದಾಬಾರೆಯ ಧರ್ಮ ಚಾವಡಿಯಲ್ಲಿ ಸಾಮೂಹಿಕ ಪ್ರಾರ್ಥನೆ ಬಳಿಕ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ, ನಾಗಬನ, ಬಸಡಿ ಪೂಜಾ ಪ್ರಸಾದ ದೊಂದಿಗೆ ಅರಮನೆಯ ಧರ್ಮ ಚಾವಡಿಯಿಂದ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರ ಅನುಮತಿ ಪಡೆದು ಕಂಬಳದ ಎರು ಬಂಟ ಸಹಿತ ವಿಜೃಂಭಣೆಯ ಮೆರವಣಿಗೆಯೊಂದಿಗೆ ಬಂದು ಪ್ರಸಾದವನ್ನು ಕಂಬಳದ ಕರೆಗೆ ಸಿಂಪಡಿಸುವುದರ ಮೂಲಕ ಕಂಬಳಕ್ಕೆ ಚಾಲನೆ ನೀಡಲಾಯಿತು.

ಕಂಬಳದ ಉದ್ಘಾಟನೆಯನ್ನು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತಸರ ಮನೋಹರ ಶೆಟ್ಟಿ ಉದ್ಘಾಟಿಸಿದರು, ಅಧ್ಯಕ್ಷತೆಯನ್ನು ಬಳಕುಂಜೆ ಗುತ್ತು ಗುತ್ತಿನಾರ್ ರವೀಂದ್ರ ಶೆಟ್ಟಿ ವಹಿಸಿದ್ದರು.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ವಿದ್ವಾನ್ ಪಂಜ ಭಾಸ್ಕರ್ ಭಟ್, ವೇ.ಮೂ. ವಾದಿರಾಜ ಉಪಾಧ್ಯಾಯ ಕೊಲಕಾಡಿ, ಅರ್ಚಕ ನರಸಿಂಹ ಭಟ್ ಬಪ್ಪನಾಡು, ಮಾಜೀ ಸಚಿವ ಅಭಯ್ ಚಂದ್ರ ಜೈನ್, ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹರಿದಾಸ್ ಭಟ್ ತೋಕೂರು, ಅಪ್ಪು ಯಾನೆ ಶ್ರೀನಿವಾಸ ಪೂಜಾರಿ ಸಸಿಹಿತ್ತು ಉಳೆ ಪಾಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ಮೋಹನ ದಾಸ ಸುರತ್ಕಲ್, ಕದಿಕೆ ಜುಮ್ಮಾ ಮಸೀದಿಯ ಪಿಎ ಅಬ್ದುಲ್ ಜೈನಿ ಬಡಗನ್ನೂರು, ಹಳೆಯಂಗಡಿ ಸಿಎಸ್‌ಐ ಚರ್ಚ್ ನ ವಿನಯ ಲಾಲ್ ಬಂಗೇರ, ಗುತ್ತಿನಾರ್ ಸುಧಾಕರ ಶೆಟ್ಟಿ, ಬಿಜೆಪಿ ನಾಯಕರಾದ ಕೆಪಿ ಸುದರ್ಶನ್, ಕಸ್ತೂರಿ ಪಂಜ, ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ

ಭುಜಂಗ ಶೆಟ್ಟಿ, ಪಡು ಪಣಂಬೂರು ಗ್ರಾಪಂ ಅಧ್ಯಕ್ಷೆ ಮಂಜುಳಾ, ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ, ರತ್ನಾಕರ ಶೆಟ್ಟಿಗಾರ್ ಕಲ್ಲಾಪು, ಕೆಪಿಸಿಸಿ ಸದಸ್ಯ ವಸಂತ್

ಕಂಬಳ ಸಮಿತಿಯ ಗೌರವಾಧ್ಯಕ್ಷ ಎಂ ಎಚ್ ಅರವಿಂದ ಪೂಂಜ, ಅಧ್ಯಕ್ಷ ಕಿರಣ್

ಶೆಟ್ಟಿ ಕೋಲ್ನಾಡ್ ಗುತ್ತು, ಗೌತಮ್ ಜೈನ್ ಮುಲ್ಕಿ ಅರಮನೆ, ಶೇಖರ್ ಶೆಟ್ಟಿ ಕಿಲ್ಪಾಡಿ

ಬಂಡಸಾಲೆ, ಮಂಡಲಾಧ್ಯಕ್ಷ ಸುನಿಲ್ ಆಳ್ವ ಸುಚೇಂದ್ರ ಅಮೀನ್ ಬರ್ಕೆ, ಶ್ಯಾಮ್ ಪ್ರಸಾದ್, ವಿನೋದ್ ಸಾಲ್ಯಾನ್ ಬೆಳ್ಳಾಯರು, ದಿನೇಶ್ ಸುವರ್ಣ, ಮೋಹನ್ ಕೋಟ್ಯಾನ್, ಮತ್ತಿತರರು ಉಪಸ್ಥಿತರಿದ್ದರು

ನವೀನ್ ಶೆಟ್ಟಿ ಎಡೇಮಾರ್ ನಿರೂಪಿಸಿದರು. ಬಳಿಕ ಮುಲ್ಕಿ ಅರಮನೆಯ ಹಾಗೂ ಬಪ್ಪನಾಡು ಶ್ರೀ ಕಾಂತು ಪೂಜಾರಿ ಯಾನೆ ಸೇವೆಗಾರ್ ರವರ ಮನೆಯ ಕೋಣಗಳು ಪ್ರಥಮವಾಗಿ ಕಂಬಳದ ಕರೆಗೆ ಇಳಿದು ಸಂಪ್ರದಾಯದಂತೆ ಕಂಬಳ ನಡೆಯಿತು.

error: Content is protected !!