ಕೊಟ್ಟಾರಚೌಕಿ: 5 ಕೋಟಿ ರೂ.ವೆಚ್ಚದಲ್ಲಿ ಆಗುತ್ತಿರುವ
ಕೊಟ್ಟಾರ ಚೌಕಿ ಜಂಕ್ಷನ್ ಅಭಿವೃದ್ಧಿ ಕಾಮಗಾರಿಯನ್ನು
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ವೀಕ್ಷಿಸಿದರು. ಈ ಸಂದರ್ಭ ಸ್ಥಳೀಯ ಕಾರ್ಪೊರೇಟರ್ ಆಗಿರುವ ಕಿರಣ್ ಕುಮಾರ್ ಕೊಡಿಕಲ್,
ಪಾಲಿಕೆ ಇಂಜಿನಿಯರ್ ಖಾದರ್ ಜತೆಗಿದ್ದು ಮಾಹಿತಿ ನೀಡಿದರು. ಕಾಮಗಾರಿಯನ್ನ ತ್ವರಿತವಾಗಿ ಮುಗಿಸುವಂತೆ ಈ ಸಂದರ್ಭ ಸಲಹೆಯನ್ನ ನೀಡಿದರು. ಕೊಟ್ಟಾರ ಚೌತಿ ಜಂಕ್ಷನ್ ನಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಮತ್ತಿತರ ಕಾಮಗಾರಿ ನಡೆಯುತ್ತಿದೆ.
ಉಮೇಶ್ ಮಲರಾಯ ಸಾನ, ಜಯಪ್ರಕಾಶ್ ಕುಲಾಲ್, ಅಶೋಕ್ ಕುಲಾಲ್, ರಾಜೇಶ್ , ಸುರೇಶ್ ಭಂಡಾರಿ, ಕಿರಣ್ ಕೋಟ್ಯಾನ್, ಗೋಪಾಲ್ ಶೆಟ್ಟಿ ಸ್ಥಳೀಯರು, ಪಕ್ಷದ ಪ್ರಮುಖರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಅಮರ್ ಜವಾನ್ ಸ್ಮಾರಕ ಹಾಗೂ ವೃತ್ತ:
ಹೆದ್ದಾರಿ ಹಾಗೂ ನಗರ ಸಂಪರ್ಕಿಸುವ ಕೊಟ್ಟಾರಚೌಕಿಯಲ್ಲಿ ಅಮರ್ ಜವಾನ್ ಸ್ಮಾರಕ ಹಾಗೂ ವೃತ್ತ ನಿರ್ಮಾಣ ನಡೆಯಲಿದೆ. ವೀರಯೋಧರ ಸ್ಮರಣೆ ಹಾಗೂ ಗೌರವ ಸಲ್ಲಿಸಲು ಈ ಯೋಜನೆ ರೂಪಿಸಲಾಗಿದೆ.ಇದರ ಜತೆಗೆ ಮಾಲೇಮಾರ್ ನಿಂದ ಬರುವ ಭಾಗದಲ್ಲಿ ಸರ್ವಿಸ್ ರಸ್ತೆ , ಕೊಟ್ಟಾರಚೌಕಿಯಲ್ಲಿ ಶೌಚಾಲಯ ಹಾಗೂ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಲಿದೆ.ಇದೀಗ ಭೂಗತ ಕೇಬಲ್ ಪೈಪ್ ಲೈನ್ ಸ್ಥಳಾಂತರ, ಕುಡಿಯುವ ನೀರಿನ ಪೈಪ್ ಲೈನ್ ಹೊಸದಾಗಿ ಈ ಭಾಗದಲ್ಲಿ ಹಾಕುವ ಕಾಮಗಾರಿ ಪ್ರಗತಿಯಲ್ಲಿದೆ. ಮೂರು ತಿಂಗಳ ಒಳಗಾಗಿ ಕಾಮಗಾರಿ ಮುಗಿಸುವಂತೆ ಸೂಚಿಸುವುದಾಗಿ ನುಡಿದರು.