ಮೂಲ್ಕಿ: ಸುಮಾರು 400 ವರ್ಷಗಳ ಇತಿಹಾಸವಿರುವ ಮೂಲ್ಕಿ ಸೀಮೆಯ ಪಡುಪಣಂಬೂರು ಅರಸು ಕಂಬಳಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು ನಾಳೆ ನಡೆಯಲಿರುವ ಕಂಬಳಕ್ಕೆ ಸಿದ್ಧವಾಗಿದೆ.
ಕಂಬಳದ ಎರಡು ಕರೆಗಳನ್ನು ನವೀಕರಿಸಲಾಗಿದ್ದು ತುಳು ಲಿಪಿಯಲ್ಲಿ (ಮುಡಾಯಿ, ಪಡ್ಡಾಯಿ) ಬರೆದು ವಿಶಿಷ್ಟ ರೀತಿಯಲ್ಲಿ ಜನಾಕರ್ಷಣೆಗೆ ಒಳಗಾಗಿದ್ದು ವಿದ್ಯುತ್ ದೀಪಾಲಂಕೃತ ಹಾಗೂ ತಳಿರು ತೋರಣಗಳಿಂದ ಸಿಂಗರಿಸಲ್ಪಟ್ಟಿದೆ.
ನಾಳೆ ಡಿಸೆಂಬರ್ 31 ರಂದು ಸೀಮೆ ಅರಸರಾದ ದುಗ್ಗಣ್ಣ ಸಾವಂತ ಅರಸರ ನೇತೃತ್ವದಲ್ಲಿ ನಡೆಯಲಿರುವ ಸೀಮೆಯ ಕಂಬಳವನ್ನು ಯಶಸ್ವಿಗೊಳಿಸಲು ಸಮಿತಿಯ ಪದಾಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು ಸಮಿತಿಯ ಅಧ್ಯಕ್ಷರಾದ ಕಿರಣ್ ಶೆಟ್ಟಿ ಕೋಲ್ನಾಡುಗುತ್ತು ತಿಳಿಸಿದ್ದಾರೆ.
ಈ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ದಿನೇಶ್ ಸುವರ್ಣ ಬೆಳ್ಳಾಯರು, ಶ್ಯಾಮ್ ಪ್ರಸಾದ್, ವಿನೋದ್ ಸಾಲ್ಯಾನ್ ಬೆಳ್ಳಾಯರು, ಶಶಿಂದ್ರ ಸಾಲ್ಯಾನ್, ಮತ್ತಿತರರು ಉಪಸ್ಥಿತರಿದ್ದರು.