ಸುರತ್ಕಲ್: ಕೃಷ್ಣಾಪುರ ನಿವಾಸಿ ಅಬ್ದುಲ್ ಜಲೀಲ್ ಹತ್ಯೆಯಲ್ಲಿ ನೇರವಾಗಿ ಪಾಲ್ಗೊಂಡ ಇಬ್ಬರು ಹಾಗೂ ಇನ್ನೊಬ್ಬ ಬೈಕ್ ನಲ್ಲಿ ಕರೆದೊಯ್ದು ಸಹಹರಿಸಿದವನನ್ನು ಬಂಧಿಸಿದ್ದಾಗಿ ಮಂಗಳೂರು ನಗರ ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.
ಇನ್ನಷ್ಟು ತನಿಖೆ ನಡೆಯಲಿದ್ದು ಆರೋಪಿಗಳ ಸಂಪೂರ್ಣ ಮಾಹಿತಿ ಮುಂದೆ ನೀಡುವುದಾಗಿ ಕಮಿಷನರ್ ಹೇಳಿದರು. ಮೂಲಗಳ ಪ್ರಕಾರ ಇಬ್ಬರು ಈ ಹಿಂದೆ ನಡೆದಿದ್ದ ದೀಪಕ್ ರಾವ್ ಹತ್ಯೆ ಆರೋಪಿ ಪಿಂಕಿ ನವಾಜ್ ಹತ್ಯಾ ಯತ್ನದಲ್ಲಿ ಪಾಲ್ಗೊಂಡಿದ್ದ ಶೈಲೇಶ್, ಸುವಿನ್ ಕಾಂಚನ್ ಯಾನೆ ಮುನ್ನಾ ಹಾಗೂ ರವುಫ್ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಕೃಷ್ಣಾಪುರ ನಿವಾಸಿ ರೌಡಿಶೀಟರ್ ಒಬ್ಬನ ಪುತ್ರ ಎಂದು ಹೇಳಲಾಗಿದೆ. ಆರೋಪಿಗಳು ಕೃಷ್ಣಾಪುರ ಪ್ರದೇಶವನ್ನು ಗಾಂಜಾ ಅಡ್ಡೆಯನ್ನಾಗಿ ಮಾಡಿಕೊಂಡಿದ್ದು ಹಲವಾರು ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿಸಿಕೊಂಡವರು ಎನ್ನಲಾಗಿದೆ.