ಸುರತ್ಕಲ್: ಕೃಷ್ಣಾಪುರ-ಕಾಟಿಪಳ್ಳದಲ್ಲಿ ನಡೆದಿರುವ ಅಬ್ದುಲ್ ಹತ್ಯೆ ಪ್ರಕರಣಕ್ಕೆ ಸುರತ್ಕಲ್ ಜಂಕ್ಷನ್ ನಲ್ಲಿ ಪೊಲೀಸರು ರಸ್ತೆ ಬಂದ್ ಮಾಡಿದ್ದು ಇದರಿಂದ ಇಂದು ಮುಂಜಾನೆಯಿಂದಲೇ ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾಯಿತು.
ಆದಿತ್ಯವಾರ ಸುರತ್ಕಲ್ ಪೊಲೀಸರ ವಾಹನ ನಿಲುಗಡೆ ,ಓಡಾಟಕ್ಕೆ ಹಾಗೂ ರವಿವಾರ ಜಲೀಲ್ ಅವರ ಪಾರ್ಥಿವ ಶರೀರ ಕೊಂಡೊಯ್ಯಲು ಸುರತ್ಕಲ್ ಜಂಕ್ಷನ್ ನಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಆದರೆ ಇಂದು ಮುಂಜಾನೆಯಾದರೂ ಬ್ಯಾರಿಕೇಡ್ ತೆರವುಗೊಳಿಸಲಾಗಿಲ್ಲ. ಸ್ಥಳದಲ್ಲಿ ಪೊಲೀಸರ ಉಪಸ್ಥಿತಿಯೂ ಇಲ್ಲ. ಇದರಿಂದ ಸುರತ್ಕಲ್ ನಲ್ಲಿ ಕಿಮೀಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು ಜನರು ಸಂಚಾರಕ್ಕೆ ಗಂಟೆಗಳ ಕಾಲ ಪರದಾಡುವಂತಾಯಿತು.