ಸುರತ್ಕಲ್: “ಕೆರೆ, ಪಾರ್ಕ್ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿ ಪರಿಸರಕ್ಕೆ ಪೂರಕವಾದ ಅಭಿವೃದ್ಧಿ ಕಾರ್ಯ ಮಾಡುವುದು ಇಂದಿನ ಅಗತ್ಯವಾಗಿದೆ” ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ನುಡಿದರು. ಅವರು ಮನಪಾ ವಾರ್ಡ್ ನಂ7ರಲ್ಲಿ 54 ಲಕ್ಷ ರೂ.ವೆಚ್ಚದಲ್ಲಿ 7 ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಕಾವೂರು ಕೆರೆ ಅಭಿವೃದ್ಧಿಯಾಗುತ್ತಿದೆ. ಬಗ್ಗುಂಡಿ ಕೆರೆಯನ್ನು ಪುನರ್ ನಿರ್ಮಿಸಲು ಬೃಹತ್ ಕಂಪನಿಗಳಿಂದ ನೆರವು ಕೋರಲಾಗಿದೆ. ಕೆರೆಯ ವಿಸ್ತೀರ್ಣ ಗುರುತಿಸಲು ಡೋನ್ ಸರ್ವೆ ಮಾಡಲಾಗುತ್ತಿದೆ. ಇಲ್ಲಿಗೆ ಹರಿದು ಬರುವ ಮಾಲಿನ್ಯ ನೀರನ್ನು ತಡೆಯಲು ಸೂಕ್ತ ಪರಿಹಾರೋಪಾಯ ಮತ್ತು ಕುಡುಂಬೂರು ಸುತ್ತಮುತ್ತಲಿನ ಕಾಲುವೆಗಳ ಮಾಲೀನ್ಯವನ್ನು ನಿವಾರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದರು.
ಮೇಯರ್ ಜಯಾನಂದ ಅಂಚನ್, ಸ್ಥಳೀಯ ಕಾರ್ಪೊರೇಟರ್ ಮತ್ತು ಸ್ಥಾಯೀ ಸಮಿತಿ ಅಧ್ಯಕ್ಷೆನಯನ ಆ ಕೋಟ್ಯಾನ್, ಮನಪಾ ಸದಸ್ಯ ವರುಣ್ ಚೌಟ, ಬಿಜೆಪಿ ಮಂಡಲ ಉಪಾಧ್ಯಕ್ಷ ವಿಠಲ್ ಸಾಲ್ಯಾನ್, ಮಹಾ ಶಕ್ತಿಕೇಂದ್ರ ಕಾರ್ಯದರ್ಶಿ ಸುನಿಲ್ ಕುಳಾಯಿ, ಯುವಮೋರ್ಚಾ ಮಂಡಲ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಶಕ್ತಿಕೇಂದ್ರ ಪ್ರಮುಖ್ ಸತೀಶ್ ದೇವಾಡಿಗ, ಮನೀಶ್, ಸಹ ಪ್ರಮುಖ್ ಸುರೇಶ್ ಸಾಲ್ಯಾನ್, ಬಿಜೆಪಿ ಪ್ರಮುಖರಾದ ಜಯಂತ್ ಸಾಲ್ಯಾನ್, ಜಯಂತ್ ಕರ್ಕೇರ ಆನಂದ ಭಂಡಾರಿ, ಬಾಲಕೃಷ್ಣ ಕೆಂಚನೂರ್, ಸ್ಥಳೀಯರಾದ ದೇವದಾಸ್, ಮಾದವ, ಗೋಪಿನಾಥ್, ಶ್ರೀನಿವಾಸ್, ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರಾದ ಡೆನ್ನಿಸ್ ಲೋಬೋ ಮತ್ತಿತರರು ಉಪ ತರಿದ್ದರು.