ಕೆ.ಪ್ರಕಾಶ್ ಶೆಟ್ಟಿ ಅವರಿಗೆ ಪ್ರತಿಷ್ಠಿತ ಎಸ್.ಐ.ಎಚ್.ಆರ್.ಎ. ಪ್ರಶಸ್ತಿ

ಮಂಗಳೂರು: ಎಂ.ಆರ್.ಜಿ. ಗ್ರೂಪಿನ ಸ್ಥಾಪಕಾಧ್ಯಕ್ಷರು ಶ್ರೀ ಕೆ.ಪ್ರಕಾಶ್ ಶೆಟ್ಟಿ ಅವರಿಗೆ ದಕ್ಷಿಣ ಭಾರತದ ಆತಿಥ್ಯ ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಎಸ್.ಐ.ಎಚ್.ಆರ್.ಎ. ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದಕ್ಷಿಣ ಭಾರತದ ಹೊಟೇಲ್ ಮತ್ತು ರೆಸ್ಟೋರೆಂಟ್ ಗಳ ಸಂಘದ ವಾರ್ಷಿಕ ಸಮ್ಮೇಳನದಲ್ಲಿ ನಡೆದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕದ ಪ್ರವಾಸೋದ್ಯಮ ಸಚಿವರಾದ ಶ್ರೀ ಆನಂದ ಸಿಂಗ್, ತಮಿಳುನಾಡಿನ ಪ್ರವಾಸೋದ್ಯಮ ಸಚಿವ ಡಾ. ಮತಿವೆಂತನ್, ಪುದುಚೇರಿ ಪ್ರವಾಸೋದ್ಯಮ ಸಚಿವ ಕೆ.ಲಕ್ಷ್ಮೀನಾರಾಯಣನ್ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

error: Content is protected !!