ಸುರತ್ಕಲ್: ಇಲ್ಲಿನ ಎನ್ ಐಟಿಕೆ ಬಳಿಯಲ್ಲಿನ ಅಕ್ರಮ ಟೋಲ್ ಗೇಟ್ ವಿರುದ್ಧ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಕಳೆದ 17 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು ಹೋರಾಟಗಾರರ ಪ್ರಯತ್ನಕ್ಕೆ ಸಿಕ್ಕ ಫಲ ಎಂಬಂತೆ ಟೋಲ್ ಗೇಟ್ ರದ್ದಾಗಿರುವ ಕುರಿತು ಟ್ವಿಟರ್ ನಲ್ಲಿ ನಳಿನ್ ಕುಮಾರ್ ಕಟೀಲ್ ಮಾಹಿತಿ ಹಂಚಿಕೊಂಡಿದ್ದಾರೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಟೋಲ್ ವಿರೋಧಿ ಹೋರಾಟ ಸಮಿತಿ ಮುಖಂಡರಾದ ಮುನೀರ್ ಕಾಟಿಪಳ್ಳ, ಪ್ರತಿಭಾ ಕುಳಾಯಿ ಅವರು, “ಸಂಸದರು ನೀಡಿದ ಟ್ವಿಟರ್ ಸ್ಟೇಟ್ ಮೆಂಟ್ ನೋಡಿ ಅಹೋರಾತ್ರಿ ಹೋರಾಟ ನಿಲ್ಲಿಸುವುದಿಲ್ಲ. ಈ ಹಿಂದೆಯೂ ಸಂಸದರು ಗಡುವು, ದಿನಾಂಕ ನೀಡಿದ್ದು ಯಾವುದೂ ಕೂಡಾ ಈಡೇರಿಲ್ಲ. ಹೀಗಾಗಿ ಟೋಲ್ ತೆರವುಗೊಳ್ಳುವ ತನಕ ಹಗಲು, ರಾತ್ರಿ ಧರಣಿ ಮುಂದುವರಿಯಲಿದೆ” ಎಂದಿದ್ದಾರೆ.