ಕಿನ್ನಿಗೋಳಿ: ಇಲ್ಲಿಗೆ ಸಮೀಪದ ಐಕಳ ಬಾವ ಕಾಂತಾಬಾರೆ ಬೂದಾಬಾರೆ ಕಂಬಳ ಬರುವ ವರ್ಷ ಫೆಬ್ರವರಿ 4 ರಂದು ನಡೆಯಲಿದ್ದು ಈ ಬಾರಿಯೂ ಗ್ರಾಮಸ್ಥರ, ಸಂಘ ಸಂಸ್ಥೆಗಳ ಸಹಕಾರ ಅಗತ್ಯ, ಕಂಬಳದ ಪೂರ್ವಭಾವಿಯಾಗಿ ಈ ಬಾರಿಯೂ ಕ್ರೀಡೋತ್ಸವ ನಡೆಯಲಿದೆಯೆಂದು ಐಕಳ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿ ಪ್ರಸಾದ್ ಶೆಟ್ಟಿ ಹೇಳಿದರು.
ಐಕಳ ಬಾವದಲ್ಲಿ ನಡೆದ ಐಕಳ ಕಂಬಳದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈ ಸಂದರ್ಭ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಲದ ನಿರ್ದೇಶಕರಾಗಿ ಆಯ್ಕೆಯಾದ ಸಮಿತಿ ಸದಸ್ಯ ದೇವಿಪ್ರಸಾದ್ ಶೆಟ್ಟಿ ಅವರನ್ನು ಸಮಿತಿ ವತಿಯಿಂದ ಗೌರವಿಸಲಾತು. ಚಿತ್ತರಂಜನ್ ಭಂಡಾರಿ, ಮುರಳೀಧರ ಶೆಟ್ಟಿ, ಪ್ರಕಾಶ್ ಶೆಟ್ಟಿ ಪಡುಬಿದ್ರೆ, ಕೃಷ್ಣ ಮಾರ್ಲ, ಸ್ವರಾಜ್ ಶೆಟ್ಟಿ, ಶರತ್ ಶೆಟ್ಟಿ, ಸಾಯಿನಾಥ ಶೆಟ್ಟಿ, ಯೋಗೀಶ್ ರಾವ್, ದಯೇಶ್ ಐಕಳ, ಲೀಲಾಧರ ಶೆಟ್ಟಿ, ರಘುರಾಮ ಶೆಟ್ಟಿ ಸುಧಾಮ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.