ಮಂಗಳೂರು: ಮಡಿಕೇರಿ ಟೂರ್ ನಿಂದ ವಾಪಾಸ್ ಬಂದು ಸುಸೈಡ್ ಮಾಡ್ಕೊಂಡ ನವದಂಪತಿ!

ಮಂಗಳೂರು: ಮಡಿಕೇರಿ ಪ್ರವಾಸಕ್ಕೆ ಹೋಗಿ ವಾಪಸ್ ಬಂದಿದ್ದ ನವದಂಪತಿ ಕೆಲವೇ ಗಂಟೆಗಳಲ್ಲಿ ನೇಣು ಬಿಗಿದು ಸುಸೈಡ್ ಮಾಡ್ಕೊಂಡ ಘಟನೆ ಕಂಕನಾಡಿ ಪೋಲಿಸ್ ಠಾಣಾ ವ್ಯಾಪ್ತಿಯ ಅಡುಮರೋಳಿ ಎಂಬಲ್ಲಿ ಮುಂಜಾನೆ ಬೆಳಕಿಗೆ ಬಂದಿದೆ.
ವೆಬ್ ಡಿಸೈನರ್ ಆಗಿ ಕೆಲಸ ಮಾಡಿಕೊಂಡಿದ್ದ ಹುಬ್ಬಳ್ಳಿ ಮೂಲದ ಮಲ್ಲಿಕಾರ್ಜುನ್(35) ಮತ್ತು ಐಟಿಐ ಕಾಲೇಜ್ ಉಪನ್ಯಾಸಕಿ ಸೌಮ್ಯ(34) ಆತ್ಮಹತ್ಯೆ ಮಾಡಿಕೊಂಡವರು. ಇವರು ಒಂದೂವರೆ ವರ್ಷದ ಹಿಂದೆ ಪ್ರೀತಿಸಿ ವಿವಾಹವಾಗಿದ್ದು ಎರಡು ದಿನಗಳ ಹಿಂದೆ ಮಡಿಕೇರಿಗೆ ಪ್ರವಾಸ ತೆರಳಿದ್ದು ನಿನ್ನೆ ರಾತ್ರಿಯಷ್ಟೇ ಮಂಗಳೂರಿಗೆ ವಾಪಾಸಾಗಿದ್ದರು.
ಮಲ್ಲಿಕಾರ್ಜುನ ನೇಣಿಗೆ ಶರಣಾಗಿದ್ದು ಈ ವಿಚಾರವನ್ನು ಸೌಮ್ಯ ಅವರು ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದರು. ಅವರು ಮನೆಗೆ ತಲುಪುವ ಮೊದಲೇ ಸೌಮ್ಯ ಕೂಡ ನೇಣಿಗೆ ಶರಣಾಗಿದ್ದಾರೆ.

error: Content is protected !!