
ಸುರತ್ಕಲ್: ಎಂ,ಅರ್,ಪಿ,ಎಲ್ ಕರ್ಮಚಾರಿ ಸಂಘದ ವತಿಯಿಂದ ಎಂ,ಅರ್,ಪಿ,ಎಲ್ ಕಾರ್ಗೋಗೇಟ್ ಬಳಿ ಎಂ,ಅರ್,ಪಿ,ಎಲ್ ಸಂಸ್ಥೆಯಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕಾರ್ಮಿಕರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಇ.ಎಸ್.ಐ ವಿಮೆಯಿಂದ ವಂಚಿತರಾದ ಕಾರ್ಮಿಕರಿಗೆ ಆರೋಗ್ಯ ಭದ್ರತೆ ನೀಡಬೇಕು ಪಿ,ಎಸ್,ಅರ್ ಟೆಂಡರನ್ನು ರದ್ದು ಮಾಡಬೇಕು,
ಎಲ್ಲಾ ಕಾರ್ಮಿಕರಿಗೆ ಎಂ,ಅರ್,ಪಿ,ಎಲ್ ವಿಶೇಷ ಭತ್ಯೆಯನ್ನು ಹೆಚ್ಚಿಸಬೇಕು, ಮಹಿಳಾ ಕಾರ್ಮಿಕರಿಗೆ ಶೌಚಾಲಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು, ಬಯೋ ಗ್ಯಾಸ್ ಕಾರ್ಮಿಕರಿಗೆ ಕಡಿತಗೊಳಿಸಿದ ದರ್ಜೆಯನ್ನು ಸರಿಪಡಿಸಬೇಕು, ಕೆಲಸವನ್ನು ಒದಗಿಸಬೇಕು ಮತ್ತು ವೇತನದಿಂದ ಕಡಿತಗೊಳಿಸಲಾದ ಪ್ರತಿ ತಿಂಗಳ ಬಾಕಿ ವೇತನವನ್ನು ಮರುಪಾವತಿಸಬೇಕು,

ಎಂ,ಅರ್,ಪಿ,ಎಲ್ ಎಚ್ ಅರ್ ಐ ಅರ್ ಎಸ್ ಡಬ್ಲು ಸಿ 2016 ರ ಪ್ರಕಾರ್ ಮರು ಪರಿಶೀಲಿಸಬೇಕು ಮತ್ತು ಅಗತ್ಯ ತಿದ್ದುಪಡಿಗಳನ್ನು ಮಾಡಬೇಕು.
ಸರಕಾರದಿಂದ ಹೆಚ್ಚಳವಾದ ಪರಿಷ್ಕೃತ ಕನಿಷ್ಟ ವೇತನದ ಮೊತ್ತಗಳನ್ನು ತಕ್ಷಣ ಬಾಕಿ ಉಳಿದಿರುವ ಕಾರ್ಮಿಕರಿಗೆ ಪಾವತಿಸಬೇಕು.
ಮಾನವ ಶಕ್ತಿ ಪೂರೈಕೆಯ ಟೆಂಡರನ್ನು ನಿವೃತ್ತಿ ಹೊಂದಿದ ಮತ್ತು ಮೃತಪಟ್ಟ ಕಾರ್ಮಿಕರ ಜಾಗಕ್ಕೆ ಭರ್ತಿ ಮಾಡಬೇಕು ಮತ್ತು ಕೆಲಸದ ಒತ್ತಡವನ್ನು ಕಡಿಮೆ ಮಾಡಬೇಕು.

ಕೇಂದ್ರ ಸಹಾಯಕ ಕಾರ್ಮಿಕರ ಆಯುಕ್ತರ ಕಚೇರಿಯಲ್ಲಿ ಬಾಕಿ ಉಳಿದಿರುವ ವಿವಾದಗಳನ್ನು ತಕ್ಷಣ ಬಗೆಹರಿಸಬೇಕು ಎಂಬಿತ್ಯಾದಿ ಬೇಡಿಕೆಯನ್ನು ಎಂ,ಅರ್,ಪಿ,ಎಲ್ ಸಂಸ್ಥೆಯ ಉನ್ನತ ಅಧಿಕಾರಿಗಳಿಗೆ ನೀಡಲಾಯಿತು ನಮ್ಮ ಬೇಡಿಕೆಯನ್ನು ಶೀಘ್ರವಾಗಿ ಒಂದು ತಿಂಗಳೊಳಗೆ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಮಾಡುವುದಾಗಿ ಎಚ್ಚರಿಸಲಾಯಿತು ಕರ್ಮಚಾರಿ ಸಂಘದ ಅಧ್ಯಕ್ಷ ಪ್ರಸಾದ್ ಅಂಚನ್ ಉಪಾಧ್ಯಕ್ಷ ಸುರೇಶ್ ಪೊಸ್ರಲ್ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಭಟ್, ಜತೆ ಕಾರ್ಯದರ್ಶಿ ಸುನೀಲ್ ಬೋಳ, ಸುರೇಶ್ ಪೂಜಾರಿ ಕೃಷ್ಣಾಪುರ, ಕೋಶಾಧಿಕಾರಿ ಪುರುಷೋತ್ತಮ, ಎಸ್ ಸಿ ವಿಭಾಗದ ಅಧ್ಯಕ್ಷ ಸಂತೋಷ್, ಎಂ,ಅರ್,ಪಿ,ಎಲ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಶರತ್ ಜೋಗಿ, ಉಪಾಧ್ಯಕ್ಷ ಸತೀಶ್ ಮಂಗಳಪೇಟೆ, ಪ್ರಧಾನ ಕಾರ್ಯದರ್ಶಿ ಸಾಯಿಪೃಥ್ವಿ ಉಪಸ್ಥಿತರಿದ್ದರು.