ಸುರತ್ಕಲ್ : ಯಕ್ಷ ಮಿತ್ರರು ಸುರತ್ಕಲ್ ಇದರ 20ನೇ ವಾರ್ಷಿಕೋತ್ಸವ ಮತ್ತು ಯಕ್ಷಗಾನ ತಾಳಮದ್ದಳೆ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ವೇದಿಕೆಯಲ್ಲಿ ಜರಗಿತು. ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಕಲಾವಿದರಿಗೆ ಈ ಸಂದರ್ಭದಲ್ಲಿ ಸಾಧಕ ಸನ್ಮಾನ ಮತ್ತು ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಸಂಸ್ಮರಣೆ ಕಾರ್ಯಕ್ರಮ ಜರಗಿತು.
ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿಯವರ ಸಂಸ್ಮರಣೆ ಕಾರ್ಯಕ್ರಮ ಹಾಗೂ ಇತ್ತೀಚೆಗೆ ನಿಧನರಾದ ಬಣ್ಣದ ವೇಷಧಾರಿ ಸದಾಶಿವ ಶೆಟ್ಟಿಗಾರ್, ಖ್ಯಾತ ಭಾಗವತರಾದ ದಿನೇಶ್ ಅಮ್ಮಣ್ಣಾಯ ಮತ್ತು ಕಲಾ ಪೋಷಕರಾದ ಗುರುರಾಜ ಆಚಾರ್ಯರಿಗೆ ನುಡಿನಮನವನ್ನು ಹಿರಿಯ ಯಕ್ಷಗಾನ ಅರ್ಥಧಾರಿ ಕಲಾವಿದರಾದ ಜಬ್ಬಾರ್ ಸಮೋ ಸಂಪಾಜೆ ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಳ್ಳಾಲ ಪೊಲೀಸ್ ಠಾಣೆಯ ಎಎಸ್ಐ ಕುಶಲ ಮಣಿಯಾಣಿ ಮಾತನಾಡಿ ಶುಭಹಾರೈಸಿದರು. ಅತಿಥಿಗಳಾಗಿ ಆಗಮಿಸಿದ ಕ್ಷೇತ್ರದ ಅರ್ಚಕರಾದ ಸೂರ್ಯ ನಾರಾಯಣ ಭಟ್, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್, ಕಲಾ ಪೋಷಕ ಪ್ರೇಮ್ ಶೆಟ್ಟಿ ಮುಂಬಯಿ, ಮನೋಹರ್ ಶೆಟ್ಟಿ ಸೂರಿಂಜೆ, ಮುಲ್ಕಿ ಪೋಲೀಸ್ ಠಾಣೆಯ ಎಎಸ್ಐ ಹರಿಶೇಖರ ಸೆರ್ಕಳ, ಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಪ್ರಧಾನ ಕಾರ್ಯದರ್ಶಿ ಗಂಗಾಧರ ಪೂಜಾರಿ ಶುಭಹಾರೈಸಿದರು.
20ನೇ ವರ್ಷದ ಸಾಧಕ ಸನ್ಮಾನದ ಗೌರವವನ್ನು ಯಕ್ಷಗಾನ ಕ್ಷೇತ್ರದಲ್ಲಿ ಕಳೆದ 48 ವರ್ಷಗಳಿಂದ ಕಲಾಸೇವೆಯನ್ನು ನಡೆಸುತ್ತಿರುವ ಸರಪಾಡಿ ವಿಠಲ ಶೆಟ್ಟಿಯವರಿಗೆ ರೂಪಾಯಿ 10,000 ಗೌರವಧನ, ಸನ್ಮಾನ ಪತ್ರದೊಂದಿಗೆ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಸಮರ್ಪಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಗೌರವಾಧ್ಯಕ್ಷರಾದ ಮಹಾಬಲ ಪೂಜಾರಿ ಕಡಂಬೋಡಿಯವರು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಕೆ. ರಾಜೇಶ್ ಕುಮಾರ್, ಕಾರ್ಯದರ್ಶಿ ನಾಗರಾಜ್ ಕಡಂಬೋಡಿ, ಕೋಶಾಧಿಕಾರಿ ಜಗದೀಪ್ ಶೆಟ್ಟಿ, ವಿಜಯಲಕ್ಷ್ಮೀ ರಾಜೇಶ್ , ಜೀವಿತಾ ಜಗದೀಪ್ ಶೆಟ್ಟಿ , ಗಾಯತ್ರಿ ನಾಗರಾಜ್ , ವಾಸುದೇವ ಆಚಾರ್ಯ ಕುಳಾಯಿ, ಭಾಸ್ಕರ ಅಗರಮೇಲು, ಭಾಸ್ಕರ ಅಮೀನ್, ಸಂತೋಷ್ ಬೇಕಲ್, ಶಿವಪ್ರಸಾದ್, ಹರೀಶ್ ಆಚಾರ್ಯ, ಸತೀಶ್ ಶೆಟ್ಟಿ ಬಾಳಿಕೆ, ಅನಂತರಾಜ್ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಮಹೇಶ್ ಮೂರ್ತಿ ಸುರತ್ಕಲ್ ಸ್ವಾಗತಿಸಿ ನಿರೂಪಿಸಿದರು. ಕಿರಣ್ ಆಚಾರ್ಯ ಧನ್ಯವಾದವಿತ್ತರು.