ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್, ಶ್ರೀ ಶಾರದಾ ಪೂಜಾ ಸಮಿತಿ, ಮಂಗಳಾ ಫ್ರೆಂಡ್ಸ್ ಸರ್ಕಲ್ ಊರ್ವಸ್ಟೋರ್ ಹಾಗೂ ಎ ಜೆ ಆಸ್ಪತ್ರೆ ಯ ಜಂಟಿ ಆಶ್ರಯದಲ್ಲಿ ಉರ್ವಾ ಸ್ಟೋರ್ ನ ಮಾನಸ ಮಂಟಪದ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ರವಿವಾರ ನಡೆಯಿತು.
ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನ ಅಧ್ಯಕ್ಷ ರೋ. ಬ್ರಾಯನ್ ಪಿಂಟೋ , ರೋಟರಿ ಜಿಲ್ಲೆ 3181 ಅಸಿಸ್ಟೆಂಟ್ ಗವರ್ನರ್ ಕೆ.ಯಂ .ಹೆಗ್ಡೆ , ಎ ಜೆ ದಂತ ಮಹಾವಿದ್ಯಾಲಯದ ಸಮುದಾಯ ಸೇವಾ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಹೆಗ್ಡೆ ಹಾಗೂ ರೋಟರಿ ಪದಾಧಿಕಾರಿಗಳಾದ ರವಿ ಜಲನ್, ಸಾಯಿಬಾಬಾ ರಾವ್, ರಾಜೇಶ್ ಶೆಟ್ಟಿ, ಡೆರಿಲ್, ಆರ್ ಒ ಟಿ ಮಂಗಳ ಸ್ಫೋರ್ಟ್ಸ್ ಸರ್ಕಲ್ ಊರ್ವ ಸ್ಟೋರ್ ನ ಅಧ್ಯಕ್ಷ ರಮೇಶ್ ಶೆಟ್ಟಿ, ಮಾಜಿ ರೋಟರಿ ಗವರ್ನರ್ ದೇವದಾಸ್ ರೈ, ಜಗನ್ನಾಥ್ ಶೆಟ್ಟಿ, ಜಾಕ್ಸನ್ ಸಲ್ದಾನಾ, ಡೆರಿಲ್ ಸ್ಟೀವನ್ ಡಿಸೋಜ, ಆ್ಯನ್ಸ್ ಪೂರ್ಣಿಮಾ ರೈ, ಪ್ರಮೀಳಾ ಹೆಗ್ಡೆ, ಗೀತಾ ಬಿ.ರೈ, ಎಜೆ ಆಸ್ಪತ್ರೆಯ ವೈದ್ಯರುಗಳು ಉಪಸ್ಥಿತರಿದ್ದರು. ರೋಟರಿ ರಾಜ್ ಗೋಪಾಲ್ ರೈ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಯಂ. ಹೆಗ್ಡೆ ರೋಟರಿ ಕ್ಲಬ್ ಹಮ್ಮಿ ಕೊಂಡಿರುವ ಸಾಮಾಜಿಕ ಕಾರ್ಯ ಕ್ರಮಗಳ ಮಾಹಿತಿ ನೀಡಿದರು. ಎ ಜೆ ದಂತ ಮಹಾವಿದ್ಯಾಲಯದ ಕ.ಕಮ್ಯುನಿಟಿ ದಂತವೈದ್ಯ ವಿಭಾಗದ ಮುಖ್ಯಸ್ಥೆ ಡಾ.ವಿಜಯ ಹೆಗ್ಡೆ ಶಿಬಿರದ ಮಹತ್ವವನ್ನು ತಿಳಿಸಿದರು.
ರೋ ಭಾಸ್ಕರ್ ರೈ ಕಟ್ಟ ನಿರೂಪಿಸಿದರು.
ಶಿಬಿರದಲ್ಲಿ ಹೃದಯ ತಪಾಸಣೆ, ಕಣ್ಣು ತಪಾಸಣೆ, ಅಗತ್ಯವಿದ್ದವರಿಗೆ ಕನ್ನಡಕ ವಿತರಣೆ, ರಕ್ತ ದೊತ್ತಡ ಸೇರಿದಂತೆ ಎಲ್ಲಾ ರೀತಿಯ ವೈದ್ಯಕೀಯ ಉಚಿತ ತಪಾಸಣೆ ಹಾಗೂ ಚಿಕಿತ್ಸೆಯನ್ನು ನೀಡಲಾಯಿತು. ಶಿಬಿರದಲ್ಲಿ 124 ಫಲಾನುಭವಿಗಳಿಗೆ ಉಚಿತ ತಪಾಸಣೆ ನಡೆಸಲಾಯಿತು.