ಸುರತ್ಕಲ್: ಮಂಜೇಶ್ವರದಲ್ಲಿ ಶವವಾಗಿ ಪತ್ತೆಯಾದ ಮೂಲ್ಕಿ ಕೊಲ್ನಾಡ್ ನಿವಾಸಿ ಷರೀಫ್ ಹತ್ಯೆಯಲ್ಲಿ ಪ್ರಮುಖ ಆರೋಪಿ ಸುರತ್ಕಲ್ ಕಾಟಿಪಳ್ಳದ ಅಭಿಷೇಕ್ ಶೆಟ್ಟಿ(37) ಎಂಬಾತ ಮಂಜೇಶ್ವರ ಪೊಲೀಸರ ವಶದಲ್ಲಿದ್ದಾನೆ. ಇವನೊಂದಿಗೆ ಇನ್ನೂ ಇಬ್ಬರು ಕೈಜೋಡಿಸಿದ್ದು ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿರುವುದಾಗಿ ಆರೋಪಿ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಅಭಿಷೇಕ್ ಶೆಟ್ಟಿ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಗಾಂಜಾ ಕೇಸ್, ಬಾಲಕನ ದರೋಡೆ ಕೇಸ್ ಸೇರಿ ಒಟ್ಟು ಮೂರು ಕೇಸ್ ದಾಖಲಾಗಿದೆ. ಈತನಿಗೆ ಮೂಲ್ಕಿ ಕೊಲ್ನಾಡ್ ನಿವಾಸಿ ಷರೀಫ್ ಜೊತೆ ವಾಹನ ಓಡಿಸುವ ವಿಚಾರದಲ್ಲಿ ಮಾತಿಗೆ ಮಾತು ಬೆಳೆದಿತ್ತೆನ್ನಲಾಗಿದೆ. ಅವತ್ತು ಷರೀಫ್ ಬೇರೆ ಕೋಮು ಎಂದು ತಿಳಿಯುತ್ತಲೇ ದ್ವೇಷ ಹೆಚ್ಚಿಸಿಕೊಂಡಿದ್ದ. ಹೀಗಾಗಿ ತನ್ನ ಸಹಚರರ ಜೊತೆ ಸೇರಿಕೊಂಡು ಕೊಟ್ಟಾರದಲ್ಲಿ ಮಧ್ಯರಾತ್ರಿ ತನಕ ರಿಕ್ಷಾ ಓಡಿಸಿಕೊಂಡು ತನ್ನ ಪಾಡಿಗೆ ತಾನಿದ್ದ ಷರೀಫ್ ಕೊಲೆಗೆ ಸ್ಕೆಚ್ ಹಾಕಿದ್ದ.
ನಿಖೆ ಕೈಗೆತ್ತಿಕೊಂದ ಮಂಜೇಶ್ವರ ಠಾಣಾ ಪೊಲೀಸರು ಆರೋಪಿ ಅಭಿಷೇಕ್ ಶೆಟ್ಟಿಯನ್ನು ಬಂಧಿಸಿದ್ದಾರೆ.