ಸುರತ್ಕಲ್: ಕಸಾಯಿಖಾನೆಗೆ ಸಾಗಿಸುತ್ತಿದ್ದ 3 ಹೋರಿ ವಶಕ್ಕೆ


ಸುರತ್ಕಲ್:
ಮೂಲ್ಕಿ ಬಳಿಯ ಕೆಂಚನಕೆರೆಯಿಂದ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಹೋರಿಗಳನ್ನು ಸುರತ್ಕಲ್ ಪೊಲೀಸರು ಇಲ್ಲಿನ ಸೂರಜ್ ಹೋಟೆಲ್ ಮುಂಭಾಗ ತಡೆದು ವಶಕ್ಕೆ ಪಡೆದುಕೊಂಡ ಘಟನೆ ಇಂದು ರಾತ್ರಿ 8:30ರ ವೇಳೆ ನಡೆದಿದೆ.
ಹಿಂದೂ ಸಂಘಟನೆಗಳು ಕಸಯಿಖಾನೆಗೆ ಅಕ್ರಮವಾಗಿ ಗೋವು ಸಾಗಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ವಾಹನ ತಡೆದಿದ್ದಾರೆ, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

error: Content is protected !!